×
Ad

ಬಂಟ್ವಾಳ ಪುರಸಭೆ ಎದುರು ಬಿಜೆಪಿ ಪ್ರತಿಭಟನೆ

Update: 2017-09-04 23:54 IST

ಬಂಟ್ವಾಳ, ಸೆ. 4: ಪಿಎಫ್‌ಐ, ಎಸ್‌ಡಿಪಿಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು. ಹಿಂದು ಯುವಕರ ಹತ್ಯೆ ಮತ್ತು ಹಲ್ಲೆ ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು. ಸಚಿವ ಬಿ.ರಮಾನಾಥ ರೈರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಬಂಟ್ವಾಳ ಪುರಸಭೆಯ ಮುಂಭಾಗ ಬಿಜೆಪಿ ವತಿಯಿಂದ ಪ್ರತಿಭಟನೆ  ನಡೆಯಿತು.

ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ.ಆನಂದ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು. ಬಳಿಕ ಪುರಸಭಾ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡ ರೋನಾಲ್ಡ್ ಡಿಸೋಜ ಮನವಿ ವಾಚಿಸಿದರು. ಬಿಜೆಪಿ ಮತ್ತು ಸಂಘಪರಿವಾರ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಬಿ. ದೇವದಾಸ ಶೆಟ್ಟಿ, ರಾಮದಾಸ್ ಬಂಟ್ವಾಳ, ಎ. ಗೋವಿಂದ ಪ್ರಭು, ದಿನೇಶ್ ಭಂಡಾರಿ, ಭಾಸ್ಕರ್ ಟೈಲರ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ರಾಜರಾಮ ನಾಯಕ್, ಗೋಪಾಲ ಸುವರ್ಣ, ಸುಗುಣ ಕಿಣಿ, ವಿದ್ಯಾವತಿ, ರವಿರಾಜ್ ಬಿ.ಸಿ.ರೋಡ್, ಖಲೀಲ್ ಅಹ್ಮದ್, ಮಚ್ಚೆಂದ್ರನಾಥ್, ಜನಾರ್ದನ ಬೊಂಡಾಲ, ಗಂಗಾಧರ ಪರಾರಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News