ವಾಚ್ ಪ್ರಕರಣ: ಸಿಬಿಐ ತನಿಖೆಗಾಗಿ ಪ್ರಧಾನ ಮಂತ್ರಿಗೆ ಪತ್ರ; ಮಾಜಿ ಡಿವೈಎಸ್ಪಿ ಅನುಪಮ ಶೆಣೈ
ಉಡುಪಿ, ಸೆ. 5: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹ್ಯೂಬ್ಲೋ ವಾಚ್ ಪ್ರಕರಣದ ಹಿಂದೆ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವುದಾಗಿ ಇಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ, ಪ್ರಮೋದ್ ಮಧ್ವರಾಜ್, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಮಹದೇವಪ್ಪ, ಟಿ.ಬಿ. ಜಯಚಂದ್ರ, ರಜನೀಶ್ ಗೋಯಲ್, ಡಾ. ಶಾಲಿನಿ ರಜನೀಶ್, ಉಡುಪಿಯ ಅಂದಿನ ಜಿಲ್ಲಾಧಿಕಾರಿ ವೆಂಕಟೇಶ್, ಡಾ. ಬಿ.ಆರ್. ಶೆಟ್ಟಿ ಹಾಗೂ ಡಾ. ಗಿರೀಶ್ ಚಂದ್ರ ವರ್ಮ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿರುವುದಾಗಿ ಅವರು ತಿಳಿದರು.
ನನಗೆ ಒಂದುವರೆ ತಿಂಗಳ ಬಳಿಕ ಈ ಪತ್ರಕ್ಕೆ ಉತ್ತರ ಬಂದಿದ್ದು, ಪ್ರಧಾನ ಮಂತ್ರಿ ಕಚೇರಿಯಿಂದ ಈ ಪತ್ರ ಕೇಂದ್ರ ಸರಕಾರದ ಮತ್ತೊಂದು ಕಚೇರಿಗೆ ತಲುಪಿರುವುದಾಗಿ ಅನುಪಮ ಶೆಣೈ ತಿಳಿಸಿದರು.