×
Ad

ಹುತಾತ್ಮ ಪೊಲೀಸ್ ಅಧಿಕಾರಿಯ ಮಗಳ ಶಿಕ್ಷಣಕ್ಕೆ ಗಂಭೀರ್ ನೆರವು

Update: 2017-09-05 19:02 IST

 ಶ್ರೀನಗರ, ಸೆ.5: ಕಳೆದ ತಿಂಗಳು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಪೊಲೀಸ್ ಅಧಿಕಾರಿ ಅಬ್ದುಲ್ ರಶೀದ್ ಅವರ ಪುತ್ರಿ ಝೊಹರಾಳ ಶಿಕ್ಷಣಕ್ಕೆ ನೆರವಾಗುವುದಾಗಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

 ಈ ಮಗುವಿನ ಕನಸು ನನಸಾಗಲು ನಾನು ನೆರವಾಗುತ್ತೇನೆ. ಮಗುವಿನ ಶಿಕ್ಷಣದ ಸಂಪೂರ್ಣ ವೆಚ್ಚ ನಾನು ಭರಿಸಲಿದ್ದೇನೆ ಎಂದು ಗಂಭೀರ್ ಹೇಳಿದ್ದಾರೆ. ಭಾರತದ ಮಗಳಾದ ರೊಹರ, ಲಾಲಿ ಹಾಡಿ ನಿನ್ನನ್ನು ಮಲಗಿಸಲು ನನ್ನಿಂದ ಆಗದು. ಆದರೆ ನಿನ್ನ ಕನಸನ್ನು ನನಸಾಗಿಸಿಕೊಳ್ಳಲು ನಿನ್ನನ್ನು ಎಚ್ಚರಿಸಲು ನನ್ನಿಂದ ಸಾಧ್ಯವಿದೆ. ನಿನ್ನ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ನಾನು ಪಾವತಿಸುತ್ತೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಅನಂತ್‌ನಾಗ್ ಜಿಲ್ಲೆಯ ಮೆಹಂದಿ ಕಡಲ್ ಎಂಬಲ್ಲಿ ಕಳೆದ ಆಗಸ್ಟ್ 28ರಂದು ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಅಬ್ದುಲ್ ರಶೀದ್ ಮೃತಪಟ್ಟಿದ್ದಾರೆ. ಇವರ ಅಂತ್ಯಸಂಸ್ಕಾರದ ಸಂದರ್ಭ ಪುತ್ರಿ ಝೊಹರ ತಂದೆಯ ಶವಪೆಟ್ಟಿಗೆಯನ್ನು ಅಪ್ಪಿಹಿಡಿದು ರೋಧಿಸುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News