×
Ad

ಹನಿಪ್ರೀತ್ ನೇಪಾಳಕ್ಕೆ ಪರಾರಿ?

Update: 2017-09-05 20:01 IST

ಹೊಸದಿಲ್ಲಿ, ಸೆ.5: ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮೀತ್‌ನ ನಿಕಟವರ್ತಿ ಹನಿಪ್ರೀತ್ ಇನ್ಸಾನ್ ಪೋರಸ್- ನೇಪಾಳ ಗಡಿಭಾಗದಿಂದ ನೇಪಾಳಕ್ಕೆ ಪರಾರಿಯಾಗಿರುವ ಶಂಕೆ ಇದ್ದು ಈಕೆಯ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲು ಹರ್ಯಾಣ ಪೊಲೀಸರು ಖೇರಿಯಲ್ಲಿರುವ ಗೌರಿಫಂಟ ಗಡಿಪ್ರದೇಶಕ್ಕೆ ತೆರಳಿದ್ದಾರೆ.

ಗಡಿಭಾಗದಲ್ಲಿ ಪಂಜಾಬ್‌ನ ನೋಂದಣಿ ಸಂಖ್ಯೆಯನ್ನು ಹೊಂದಿರುವ ಪರಿತ್ಯಕ್ತ ವಾಹನವೊಂದನ್ನು ವಶಕ್ಕೆ ಪಡೆಯಲಾಗಿದ್ದು, ವಾಹನದ ಮಾಲಕರ ಬಗ್ಗೆ ವಿವರ ಕಲೆಹಾಕಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಘನಶ್ಯಾಮ್ ಚೌರಾಸಿಯ ತಿಳಿಸಿದ್ದಾರೆ.

ಗುರ್ಮೀತ್ ಸಿಂಗ್‌ನ ದತ್ತುಪುತ್ರಿ ಎನ್ನಲಾಗಿರುವ 30ರ ಹರೆಯದ ಹನಿಪ್ರೀತ್, ಗುರ್ಮೀತ್‌ಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಘೋಷಿಸಲ್ಪಟ್ಟು ಹೆಲಿಕಾಪ್ಟರ್‌ನಲ್ಲಿ ಆತನನ್ನು ಪಂಚಕುಲಾಕ್ಕೆ ಸ್ಥಳಾಂತರಿಸಿದಾಗ ಆತನ ಜೊತೆಗಿದ್ದಳು. ಆದರೆ ಆ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದಳು.

ಡೇರಾ ಸಚ್ಚಾ ಸೌದದ ಮುಖ್ಯಸ್ಥ ಗುರ್ಮೀತ್ ಸಿಂಗ್ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟಿರುವ ಹನಿಪ್ರೀತ್‌ಳನ್ನು ಪತ್ತೆಹಚ್ಚಲು ಪೊಲೀಸರು ‘ಲುಕ್‌ಔಟ್’ ನೋಟಿಸ್ ಜಾರಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News