ಸಮುದ್ರಕ್ಕೆ ಇಳಿದು ನೀರುಪಾಲಾಗಿದ್ದ ಯುವಕನ ಮೃತದೇಹ ಪತ್ತೆ
ಕಾಸರಗೋಡು, ಸೆ. 5: ಚೆಂಡು ಹೆಕ್ಕಲು ಸಮುದ್ರಕ್ಕೆ ಇಳಿದು ನೀರುಪಾಲಾಗಿದ್ದ ಯುವಕನ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ.
ಮೊಗ್ರಾಲ್ ಕೊಪ್ಪಳದ ಖಲೀಲ್ (20) ಮೃತರು ಎಂದು ಗುರುತಿಸಲಾಗಿದೆ.
ಸಂಜೆ ಐದು ಗಂಟೆ ಸುಮಾರಿಗೆ ಮೊಗ್ರಾಲ್ ಸಮುದ್ರದಲ್ಲಿ ಮೀನುಗಾರರು ಮತ್ತು ಕರಾವಳಿ ಪೊಲೀಸರು ನಡೆಸಿದ ತಪಾಸಣೆ ಯಿಂದ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೇಲಕ್ಕೆತ್ತಿ ಕುಂಬಳೆ ಪೊಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆ ಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಸೆ. 2ರಂದು ಸ್ನೇಹಿತರ ಜೊತೆ ಕಡಲ ಕಿನಾರೆಯಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡು ಸಮುದ್ರಕ್ಕೆ ಬಿದ್ದಿದ್ದು, ಅದನ್ನು ತರಲು ಸಮುದ್ರಕ್ಕೆ ಇಳಿದಿದ್ದ ಖಲೀಲ್ ನೀರುಪಾಲಾಗಿದ್ದರು. ಅಲೆಗಳ ಅಬ್ಬರಕ್ಕೆ ಸಿಲುಕಿದ ಖಲೀಲ್ ನಾಪತ್ತೆಯಾಗಿದ್ದು ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ಎರ್ನಾಕುಲಂನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಖಲೀಲ್ ಬಕ್ರೀದ್ ಗಾಗಿ ಊರಿಗೆ ಬಂದಿದ್ದರು.