×
Ad

ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2017-09-05 22:16 IST

ಮಂಗಳೂರು, ಸೆ.5: ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ನಾಪತ್ತೆಯಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅತ್ತಾವರ ವಸತಿ ಸಮುಚ್ಚಯವೊಂದರಲ್ಲಿ ವಾಸವಿದ್ದ ಮರಿಯಾನ್ ವಾಲ್ಟರ್ ಪಿರೇರಾ (64) ಹಾಗೂ ಬೆಂಗರೆ ನಿವಾಸಿ ಲತೀಶ್ ಪುತ್ರನ್ (34) ನಾಪತ್ತೆಯಾದವರು.

ವಾಲ್ಟರ್ ಪಿರೇರಾ ಗೋಧಿ ಮೈ ಬಣ್ಣ, ಸಾಧಾರಣ ಶರೀರ, 5.10 ಅಡಿ ಎತ್ತರ, ಕಪ್ಪುಬಣ್ಣದ ಟಿ ಶರ್ಟ್ ಮತ್ತು ಬರ್ಮುಡಾ ಧರಿಸಿದ್ದಾರೆ. ಕನ್ನಡ, ತುಳು, ಇಂಗ್ಲಿಷ್, ಹಿಂದಿ, ಕೊಂಕಣಿ ಮಾತನಾಡುತ್ತಾರೆ. ಲತೀಶ್ ಪುತ್ರನ್ ಎಣ್ಣೆ ಕಪ್ಪುಮೈ ಬಣ್ಣ, 5.4 ಅಡಿ ಎತ್ತರ, ಕಪ್ಪುಕೂದಲು, ಸಪೂರ ಶರೀರ, ನೀಲಿ ಬಣ್ಣದ ಉದ್ದ ತೋಳಿನ ಶರ್ಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮಲಯಾಳಂ, ತುಳು, ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.  ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News