×
Ad

ಉಳ್ಳಾಲದಲ್ಲಿ ಪೊಲೀಸ್ ಪಥ ಸಂಚಲನ

Update: 2017-09-05 22:24 IST

ಮಂಗಳೂರು, ಸೆ.5: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜನಜಾಗೃತಿಯ ಭಾಗವಾಗಿ ಮಂಗಳೂರು ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪಥ ಸಂಚಲನ ಮುಂದುವರಿದಿದೆ.

ಮಂಗಳವಾರ ಉಳ್ಳಾಲ, ಮೊಗವೀರಪಟ್ನ, ಕೋಟೆಪುರ, ಉಳ್ಳಾಲ ಕೋಡಿ, ತೊಕ್ಕೊಟ್ಟು, ಕುತ್ತಾರ್ ಪ್ರದೇಶಗಳಲ್ಲಿ ಪಥ ಸಂಚಲನ ನಡೆಯಿತು.

ಆರ್‌ಎಎಫ್ 135, ಕೆಎಸ್ಸಾರ್ಪಿ 10, , ಸಿಎಆರ್ 5 ಪ್ಲಟೂನ್ ಹಾಗೂ ಸಿವಿಲ್ ಪೊಲೀಸರು ಪಥ ಸಂಚಲನ ನಡೆಸಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ಬಿಜೆಪಿ ರಾಜ್ಯ ಯುವಮೋರ್ಚಾ ಸೆ.7ರಂದು ಮಂಗಳೂರಿನಲ್ಲಿ ಏರ್ಪಡಿಸಲು ಉದ್ದೇಶಿಸಲಾದ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದರೆ. ಬಿಜೆಪಿಗರು ಪ್ರತಿಭಟನೆ ನಡೆಸಿಯೇ ಸಿದ್ಧ ಎಂದು ಸಾರಿದ್ದಾರೆ. ಇದರಿಂದ ಮಂಗಳೂರಿನಲ್ಲಿ ಮತ್ತೆ ಸೆಕ್ಷನ್ 144 ಜಾರಿಯಾಗಬಹುದಾ ಎಂಬ ಭೀತಿಯನ್ನು ಸಾರ್ವಜನಿಕರು ಹೊಂದಿದ್ದಾರೆ. ಇವೆಲ್ಲದರ ಮಧ್ಯೆ ಜನರ ಆತಂಕ ದೂರ ಮಾಡುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News