ಸೆಲ್ಫಿ ತೆಗೆಯುವಾಗ ಗನ್ ಸಿಡಿದು ಬಾಲಕ ಸಾವು

Update: 2017-09-05 17:16 GMT

ಹೊಸದಿಲ್ಲಿ, ಸೆ.4: ಸೆಲ್ಫಿ ತೆಗೆಯುವ ಸಂದರ್ಭ ಗನ್‌ನಿಂದ ಗುಂಡು ಸಿಡಿದು 8 ವರ್ಷದ ಬಾಲಕ ಮೃತಪಟ್ಟ ಘಟನೆ ಗಾಝಿಯಾಬಾದ್‌ನಲ್ಲಿ ಬುಧವಾರ ನಡೆದಿದೆ.

ಮೃತಪಟ್ಟ ಬಾಲಕನನ್ನು ಜುನೈದ್ ಎಂದು ಗುರುತಿಸಲಾಗಿದೆ. ಗೆಳೆಯರೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ಜುನೈದ್ ಗನ್ ಹಿಡಿದು ಪೋಸ್ ನೀಡಿದ್ದ. ಮಗುವೊಂದು ಆಕಸ್ಮಿಕವಾಗಿ ಗನ್‌ನ ಟ್ರಿಗರ್ ಎಳೆದ ಪರಿಣಾಮ ಗುಂಡು ಸಿಡಿದು ಜುನೈದ್‌ನ ತಲೆಗೆ ಹೊಕ್ಕಿತು ಎಂದು ಮೂಲಗಳು ತಿಳಿಸಿವೆ.

ಗಂಭೀರ ಗಾಯಗೊಂಡಿದ್ದ ಜುನೈದ್‌ನನ್ನು ಕೂಡಲೇ ದಿಲ್ಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದಾಗಲೆ ಆತ ಮೃತಪಟ್ಟಿದ್ದ.

ಜುನೈದ್‌ನ ನೆರೆಯ ಕಾಲೆಯ ಪರವಾನಿಗೆ ರಹಿತ ಗನ್ ಇದಾಗಿದೆ. ಗನ್ ಹಿಡಿದು ತನ್ನ ಗೆಳೆಯರೊಂದಿಗೆ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಜುನೈದ್‌ನ ಉದ್ದೇಶವಾಗಿತ್ತು.

ಕಾಲೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಲೆಯ ಪರವಾನಿಗೆ ರಹಿತ ಗನ್ ಬಗ್ಗೆ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News