×
Ad

ಗೌರಿ ಲಂಕೇಶ್ ಹತ್ಯೆ; ಯು.ಟಿ.ಖಾದರ್ ಖಂಡನೆ

Update: 2017-09-05 22:52 IST

ಮಂಗಳೂರು, ಸೆ. 5: ನನ್ನ ಆತ್ಮೀಯರೂ, ರಾಷ್ಟ್ರಮಟ್ಟದ ಪ್ರಗತಿಪರ ಚಿಂತಕರೂ, ಸಮಾಜದ ಶೋಷಿತ ವರ್ಗದ ಶಕ್ತಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆ ಕನ್ನಡ ನಾಡಿಗೆ ಮಾಡಿದ ದ್ರೋಹವಾಗಿದೆ. ಇದು ಖಂಡನೀಯ. ಇದರ ಹಿಂದಿರುವ ದುಷ್ಟ ಶಕ್ತಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ  ಯು.ಟಿ.ಖಾದರ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ವಿಧಾನಸೌಧದಲ್ಲಿ ತನ್ನನ್ನು ಭೇಟಿಯಾಗಿ ಇಲಾಖೆಗೆ ಸಂಬಂಧಿಸಿದ ಮನವಿಯನ್ನು ನೀಡಿದ್ದರು. ರಾಜ್ಯದ ಕಟ್ಟಕಡೆಯ ಜನರ ಧ್ವನಿಯಾಗಿದ್ದ ಗೌರಿ ಲಂಕೇಶ್ ತನ್ನ ತಂದೆ ಲಂಕೇಶ್ ಹಾದಿಯಲ್ಲಿ ನಡೆಯುತ್ತಾ ಸಂಚಲನ ಮೂಡಿಸಿದ್ದರು. ಅವರ ಹತ್ಯೆ ದೊಡ್ಡ ದುರಂತ. ಕ್ರೂರ ಮನಸ್ಸಿನ ಉಗ್ರಗಾಮಿ ಗಳಾದ ತಪ್ಪಿತಸ್ಥ ಹಂತಕರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News