ಗೌರಿ ಲಂಕೇಶ್ ಹತ್ಯೆ: ಮುಸ್ಲಿಮ್ ಲೇಖಕರ ಸಂಘ ಖಂಡನೆ
Update: 2017-09-05 23:09 IST
ಮಂಗಳೂರು, ಸೆ. 5: ಪತ್ರಕರ್ತೆ, ಸಾಹಿತಿ, ಹೋರಾಟಗಾರ್ತಿ, ಚಿಂತಕಿ ಗೌರಿ ಲಂಕೇಶ್ ಹತ್ಯೆಯನ್ನು ಕರ್ನಾಟಕ ಮುಸ್ಲಿಮ್ ಲೇಖಕರ ಸಂಘ ತೀವ್ರವಾಗಿ ಖಂಡಿಸಿದೆ. ಗೌರಿ ಲಂಕೇಶ್ ಅಗಲುವಿಕೆಯಿಂದ ಪ್ರಜಾಪ್ರಭುತ್ವ, ಜಾತ್ಯತೀತತೆ, ಜನಪರ ಮತ್ತು ಕೋಮು ಸೌಹಾರ್ದದ ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ.
ಸರಕಾರವು ಕೂಡಲೇ ತುರ್ತು ಕ್ರಮ ಕೈಗೊಂಡು ಕೊಲೆಗಡುಕರಿಗೆ ಮತ್ತು ಹತ್ಯೆಗೆ ಪ್ರೇರೇಪಿಸಿರುವ ಭಯೋತ್ಪಾದಕರಿಗೆ ಶಿಕ್ಷೆ ವಿಧಿಸಲು ಮುಂದಾಗಬೇಕು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.