×
Ad

ಬ್ಯಾಡ್ಮಿಂಟನ್: ಬಂಟಕಲ್ ಕಾಲೇಜಿಗೆ ರನ್ನರ್ಸ್‌ ಪ್ರಶಸ್ತಿ

Update: 2017-09-06 19:18 IST

ಉಡುಪಿ, ಸೆ.6: ನಿಟ್ಟೆಯ ಎನ್‌ಎಂಎಎಂಐಟಿ ಇತ್ತೀಚೆಗೆ ಆಯೋಜಿಸಿದ್ದ ವಿಟಿಯು ಮಂಗಳೂರು ವಲಯ ಅಂತರ್ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಪ್ ಟೆಕ್ನೋಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ತಂಡ ರನ್ನರ್ಸ್‌ ಟ್ರೋಫಿಯನ್ನು ಗೆದ್ದುಕೊಂಡಿದೆ.

  ಕಾಲೇಜಿನ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ನಾಮ್‌ದೇವ್ ನಾಯಕ್, ಸಿವಿಲ್ ವಿಭಾಗದ ಪವನ್, ಮೂರನೆ ವರ್ಷದ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಬೆನೆಟ್ ಹೆನ್ರಿ ಲೋಬೊ, ಸಿವಿಲ್ ವಿಭಾಗದ ಸುಮಂತ್ ಎಸ್.ಜಿ. ಮತ್ತು ಎರಡನೆ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಎಸ್. ಮನೋಜ್ ಈ ತಂಡದಲ್ಲಿದ್ದರು. ಈ ತಂಡವು ಜೆಎನ್‌ಎನ್‌ಸಿಇ ಶಿವಮೊಗ್ಗ ಇಲ್ಲಿ ನಡೆಯಲಿರುವ ರಾಜ್ಯಮಟ್ಟದ ವಿಟಿಯು ವಲಯದ ಅಂತರ್ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಕ್ರೀಡಾ ಕೂಟಕ್ಕೆ ಆಯ್ಕೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News