×
Ad

ಸಾಮಾಜಿಕ ಚಿಂತಕಿ ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸುವಂತೆ ಎಸ್.ಐ.ಓ ಆಗ್ರಹ

Update: 2017-09-06 19:37 IST

ಭಟ್ಕಳ,ಸೆ.6: ಸಾಮಾಜಿಕ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ರನ್ನು ಹಂತಕರು ಗುಂಡಿಟ್ಟು ಕೊಂದಿದ್ದು ಅಘಾತಕಾರಿ ಹಾಗೂ ಖಂಡನೀಯವಾಗಿದ್ದು ಹಂತಕರನ್ನು ಕೂಡಲೇ ಬಂಧಿಸಬೇಕು ಮತ್ತು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ ಎಸ್.ಐ.ಒ ಭಟ್ಕಳ ಶಾಖೆ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.

ಈ ಕುರಿತು ಬುಧವಾರ ಮನವಿ ಸಲ್ಲಿಸಿದ ಸಂಘದ ಸದಸ್ಯರು, ವಿಚಾರವಾದಿ ಕಲ್ಬುರ್ಗಿಯವರ ಹತ್ಯೆ ನಡೆದು ಎರಡು ವರ್ಷಗಳಾದ ಹೊತ್ತಿನಲ್ಲೇ ಇನ್ನೋರ್ವ ವಿಚಾರವಾದಿಯ ಹತ್ಯೆ ನಡೆದಿರುವುದು ವ್ಯವಸ್ಥೆಯು ಎತ್ತಸಾಗುತ್ತಿದೆ ಎನ್ನುವುದನ್ನು ಜಾಹಿರುಪಡಿಸುತ್ತಿದೆ. ಇದು ಓರ್ವ ವ್ಯಕ್ತಿಯ ಹತ್ಯೆಯಲ್ಲ ಬದಲಾಗಿ ಇದೊಂದು ವಿಚಾರಧಾರೆಯ ಹತ್ಯೆಯಾಗಿದ್ದು ಕೂಡಲೆ ಹಂಕರನ್ನು ಬಂಧಿಸಬೇಕು, ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಮನವಿಯಲ್ಲಿ  ಸರ್ಕಾರವನ್ನು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಎಸ್.ಐ.ಓ ಭಟ್ಕಳ ಶಾಖೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಝುಹೇರ್, ಕಾರ್ಯದರ್ಶಿ ಅಬೂದ್ ರುಕ್ನುದ್ದೀನ್, ಸನಾವುಲ್ಲಾ ಅಸದಿ, ನಸೀಫ್ ಇಕ್ಕೇರಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News