ಬೆಳ್ತಂಗಡಿ : ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆ
Update: 2017-09-06 19:40 IST
ಬೆಳ್ತಂಗಡಿ,ಸೆ.6: ಹಿರಿಯ ಪತ್ರಕರ್ತೆ, ಸಮಾಜಚಿಂತಕಿ, ವಿಚಾರವಾದಿ, ನ್ಯಾಯಪರ ಹೊರಾಟಗಾರ್ತಿ ಗೌರಿ ಲಂಕೇಶ್ ರ ಕಗ್ಗೊಲೆಗೆ ಕರ್ನಾಟಕ ಪ್ರಾಂತರೈತ ಸಂಘದ ಬೆಳ್ತಂಗಡಿ ತಾಲೂಕು ತೀವ್ರ ಸಂತಾಪ ವ್ಯಕ್ತಪಡಿಸಿ ಶ್ರಂದಾಂಜಲಿ ಸೂಚಿಸುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಹಾಗೂ ಸಿಪಿಐ(ಎಂ)ನ ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.
ಅವರ ಕೊಲೆ ಭಾರತದ ಪ್ರಜಾಪ್ರಭುತ್ವದ ಕೊಲೆ ಹಾಗೂ ನ್ಯಾಯ ಪರವಾದಗಳನ್ನು ಎದುರಿಸಲಾಗದ ಹೆಡಿಗಳ ಹೀನಕೃತ್ಯ ಇದಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಎಂ.ಎಂ. ಕಲ್ಬುರ್ಗಿಯು ಸೇರಿದಂತೆ ವಿಚಾರವಾದಿಗಳ ಎರಡನೇ ಕಗ್ಗೊಲೆ ಇದಾಗಿದೆ. ಕೊಲೆ ಮಾಡಿದ ದೇಶದ್ರೋಹಿ ಕೊಲೆಗಟುಕರನ್ನು ಬಂಧಿಸಿ, ಕಾನೂನು ಕ್ರಮ ಕೈಕೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.