ಬಿಸಿಸಿಐನಿಂದ ಜಿಎಸ್‌ಟಿ ಜಾಗೃತಿ ಕಾರ್ಯಕ್ರಮ
ಮಂಗಳೂರು.ಸೆ,6:ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ)ವತಿಯಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಗ್ಗೆ ಜಾಗೃತಿ ಕಾರ್ಯಾಕ್ರಮ ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿಂದು ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿಯವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ವಿಲ್ಫ್ರೆಡ್ ಡಿ ಸೋಜ ನೂತನ ಸರಕು ಮತ್ತು ಸೇವಾ ತೆರಿಗಳ ನೀತಿಯನ್ನು ತಿಳಿಸುತ್ತಾ,ಸಾರ್ವಜನಿಕರಲ್ಲಿ ವ್ಯಾಟ್ ಮತ್ತು ಜಿಎಸ್‌ಟಿ ಬಗ್ಗೆ ಇರುವ ಗೊಂದಲ ,ತೆರಿಗೆ ಪಾವತಿಯ ವ್ಯಾತ್ಯಾಸವನ್ನು ವಿವರಿಸಿ ದರು.ರಾಜ್ಯದ ಒಳಗಿನ ಸರಕು ಮತ್ತು ಸೇವೆಗಳಿಗೆ,ಅಂತರಾಜ್ಯ ಮತ್ತು ವಿದೇಶದೊಂದಿಗಿನ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಪಾವತಿಯಲ್ಲಿ ವ್ಯತ್ಯಾಸವಿದೆ. ಕೇಂದ್ರದ ಸರಕು ಮತ್ತು ಸೇವಾ ತೆರಿಗೆಯೊಂದಿಗೆ ರಾಜ್ಯ ಸರಕಾರಕ್ಕೂ ಶೇ 50 ಪಾಲಿದೆ.ಅದನ್ನು ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಎಂದು ಕರೆಯಲಾಗುತ್ತದೆ .ವಿದೇಶದೊಂದಿಗಿನ ಸರಕು ಮತ್ತು ಸೇವಾ ತೆರಿಗೆಯನ್ನು ಐಜಿಎಸ್‌ಟಿ ಎಂದು ಕರೆಯಲಾಗುತ್ತದೆ.ದೇಶದಲ್ಲಿ ಪ್ರಥಮ ಬಾರಿಗೆ ಐಜಿಎಸ್‌ಟಿ ತೆರಿಗೆಯನ್ನು ವಿಧಿಸಲಾಗುತ್ತಿದೆ.ಇದರಿಂದ ದೇಶದಲ್ಲಿ ಏಕರೂಪ ತೆರಿಗೆ ಪಾವತಿಯಿಂದ ಸರಕು ಮತ್ತು ಸೇವಾ ಕ್ಷೇತ್ರದ ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಶಂಭು ಭಟ್ ಮಾತನಾಡುತ್ತಾ,ಸೆ.10ರೊಳಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ವರ್ತಕರು ಸೇಲ್ಸ್ ಸ್ಟೇಟ್‌ಮೆಂಟ್‌ನ್ನು ಫೈಲ್ ಮಾಡಬೇಕು.ಈ ಬಗ್ಗೆ ಅವಷ್ಯಕತೆ ಇರುವ ಮಾಹಿತಿಯನ್ನು ಇಲಾಖೆಯ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಜಂಟಿ ಆಯುಕ್ತರಾದ (ಜಾರಿ ವಿಭಾಗ) ಹೇಮಾಜಿ ನಾಯಕ್,ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.ಮಂಗಳೂರು