×
Ad

ಬಿ.ಸಿ.ರೋಡ್ : ಬ್ರಹ್ಮಶ್ರೀ ನಾರಾಯಣಗುರು ಅವರ 163ನೆ ಜನ್ಮದಿನಾಚರಣೆ

Update: 2017-09-06 20:41 IST

ಬಂಟ್ವಾಳ, ಸೆ. 6: ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ 163ನೆ ಜನ್ಮದಿನಾಚರಣೆ ಬುಧವಾರ ಬೆಳಗ್ಗೆ ನಡೆಯಿತು.

ಯುವವಾಹಿನಿಯ ಬಂಟ್ವಾಳ ತಾಲೂಕು ಘಟಕ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಪತ್ರಕರ್ತ ಹರೀಶ ಮಾಂಬಾಡಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣದ ಮೂಲಕ ಸಮಾನತೆಯ ಸಂದೇಶ ಸಾರುವ ನಾರಾಯಣಗುರುಗಳ ಸಂದೇಶ ಇಂದು ಪ್ರಸ್ತುತ ಎಂದು ಹೇಳಿದರು. 

ಅಧ್ಯಕ್ಷತೆಯನ್ನು ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಲೋಕೇಶ ಸುವರ್ಣ ಅಲೆತ್ತೂರು ವಹಿಸಿದ್ದರು. ವಸತಿ ಶಾಲೆಯ ಮೆಲ್ವಿಚಾರಕ ಪ್ರಸಾದ್, ಸವಿತಾ, ಯುವವಾಹಿನಿ ಸಲಹೆಗಾರರಾದ ಬಿ.ತಮ್ಮಯ, ಅಣ್ಣು ಪೂಜಾರಿ, ಕೋಶಾಧಿಕಾರಿ ಲೋಕೇಶ್ ಪೂಜಾರಿ ಪಿ.ಜೆ ಯುವವಾಹಿನಿ ನಿಕಟ ಪೂರ್ವ ಅಧ್ಯಕ್ಷ ಅರುಣ್ ಕುಮಾರ್, ಮಾಜಿ ಅಧ್ಯಕ್ಷ ಹರೀಶ್ ಕೋಟ್ಯಾನ್, ನಾಗೇಶ್ ಪೆÇನ್ನೋಡಿ, ಸಂಘಟನಾ ಕಾರ್ಯದರ್ಶಿ ಸತೀಶ್ ಪೂಜಾರಿ ಬಾಯಿಲ, ಪ್ರಸಾದ್ ಬಾಯಿಲ, ಗಣೇಶ್ ಕುಮಾರ್, ನಿರ್ದೇಶಕ ಹರೀಶ್ ಕೋಟ್ಯಾನ್ ಕುದನೆ, ಜಯಶ್ರೀ ಕರ್ಕೇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಇದೇ ವೇಳೆ ವಸತಿ ಶಾಲಾ ಮಕ್ಕಳಿಗೆ ಹಣ್ಣುಹಂಪಲು, ಸಿಹಿ ತಿಂಡಿ, ಶಾಲಾ ಸಾಮಗ್ರಿಗಳನ್ನು ವಿತರಿಸಲಾಯಿತು. ಉಪಾಧ್ಯಕ್ಷ ಗಣೇಶ್ ಪೂಂಜರೆಕೋಡಿ ಸ್ವಾಗತಿಸಿದರು. ಮಾಜಿ ಅದ್ಯಕ್ಷ ಪ್ರೇಮನಾಥ್ ಕೆ ವಂದಿಸಿದರು, ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News