×
Ad

ಗೌರಿ ಲಂಕೇಶ್ ಹತ್ಯೆ: ನೇಪಾಳದಲ್ಲಿ ಪ್ರತಿಭಟನೆ

Update: 2017-09-06 20:44 IST

ಕಠ್ಮಂಡು, ಸೆ. 6: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ನೇಪಾಳದ ಪತ್ರಕರ್ತರು, ಸಾಹಿತಿಗಳು ಮತ್ತು ಅಂಕಣಕಾರರು ಬುಧವಾರ ಕಠ್ಮಂಡುವಿನಲ್ಲಿ ಪ್ರತಿಭಟನೆ ನಡೆಸಿದರು.

ಪತ್ರಕರ್ತೆಯನ್ನು ಬೆಂಗಳೂರಿನ ಅವರ ನಿವಾಸದ ಸಮೀಪ ಅಜ್ಞಾತ ಹಂತಕರು ಮಂಗಳವಾರ ರಾತ್ರಿ ಗುಂಡು ಹಾರಿಸಿ ಹತ್ಯೆ ನಡೆಸಿದ್ದಾರೆ.

ನೇಪಾಳದ ಪ್ರಧಾನ ಆಡಳಿತಾತ್ಮಕ ಕಟ್ಟಡ ‘ಸಿಂಘಾ ದರ್ಬಾರ್’ ಸಮೀಪ ಪ್ರತಿಭಟನೆ ನಡೆಸಿದ ಬಳಿಕ ಅವರು ಸಂತಾಪ ಸಭೆ ನಡೆಸಿದರು.

ಹತ್ಯೆ ಮತ್ತು ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿಯನ್ನು ಖಂಡಿಸುವ ಘೋಷಣಾ ಫಲಕಗಳನ್ನು ಅವರು ಪ್ರದರ್ಶಿಸಿದರು.

ಹತ್ಯೆಯ ಹಿಂದಿನ ರೂವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಭಾರತ ಸರಕಾರವನ್ನು ಒತ್ತಾಯಿಸಿದರು.

‘‘ಅಕ್ಷರಗಳ ಶಕ್ತಿಯನ್ನು ಬಂದೂಕುಗಳು ಹಿಮ್ಮೆಟ್ಟಿಸಲಾರವು’’ ಎಂದು ಅಂಕಣಕಾರ ಸಿ.ಕೆ. ಲಾಲ್ ಈ ಸಂದರ್ಭದಲ್ಲಿ ಹೇಳಿದರು.

ಭಾರತದ ಪತ್ರಿಕಾ ಸ್ವಾತಂತ್ರವು ಸಿರಿಯ ಮತ್ತು ಇರಾಕ್‌ಗಳಿಗಿಂತಲೂ ಕೆಳಗಿದೆ ಎಂಬುದನ್ನು ಈ ಹತ್ಯೆ ತೋರಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News