ಶಾಂತಿಮೊಗರು : ನೀರುಪಾಲಾದ ಸೋದರರಲ್ಲಿ ಒರ್ವನ ಮೃತ ದೇಹ ಪತ್ತೆ
ಪುತ್ತೂರು,ಸೆ.6: ಶಾಂತಿಮೊಗರು ಸೇತುವೆ ಬಳಿ ಕುಮಾರಧಾರಾ ನದಿಗೆ ಮಂಗಳವಾರ ಸ್ನಾನಕ್ಕಿಳಿದು ನೀರುಪಾಲಾದ ಸಹೋದರರಿಬ್ಬರ ಪೈಕಿ ಓರ್ವರ ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ನೀರು ಪಾಲಾಗಿದ್ದ ಸತ್ಯಪ್ರಸಾದ್(27) ಅವರ ಮೃತದೇಹ ಸ್ನಾನಕ್ಕಿಳಿದ ಸ್ಥಳದಿಂದ ಸುಮಾರು 700 ಮೀಟರ್ ದೂರದಲ್ಲಿ ಮೃತದೇº ಪತ್ತೆಯಾಗಿದೆ. ಬೆಳ್ಳಾರೆ ಠಾಣಾಧಿಕಾರಿಗಳು ಮೃತದೇಹದ ಮಹಜರು ನಡೆಸಿದರು. ಬಳಿಕ ಕಡಬ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಬಿಟ್ಟುಕೊಡಲಾಯಿತು. ಇನ್ನೋರ್ವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಡಬ ಹೋಬಳಿಯ ಕುಟ್ರುಪ್ಪಾಡಿ ಗ್ರಾಮದ ಹರಿಪ್ರಸಾದ್, ಸತ್ಯಪ್ರಸಾದ್ ಸಹೋದರರು ತನ್ನ ಚಿಕ್ಕಪ್ಪನ ಮಗ ರೋಹಿತ್‍ನೊಂದಿಗೆ ಮಂಗಳವಾರದಂದು ಶಾಂತಿಮೊಗರು ಬಳಿ ಕುಮಾರಾಧಾರಾ ನದಿಗೆ ಸ್ನಾನಕ್ಕಿಳಿದ ಸಂದರ್ಭ ಹರಿಪ್ರಸಾದ್ ಹಾಗೂ ಸತ್ಯಪ್ರಸಾದ್ ನೀರಿನ ಸುಳಿಯಲ್ಲಿ ಸಿಲುಕಿ ನೀರುಪಾಲಾಗಿದ್ದರು. ಕಣ್ಮರೆಯಾಗಿದ್ದರು.
ತಣ್ಣೀರು ಬಾವಿ ತಂಡದ ವಾಸಿಂ ತಣ್ಣೀರುಬಾವಿ, ಸಾದಿಕ್ ತಣ್ಣೀರುಬಾವಿ, ಜಾಕಿರ್ ಹುಸೈನ್, ಜಾವಿದ್ ತಣ್ಣೀರುಬಾವಿ, ಹಸನ್ ಪಿ.ಟಿ., ವಿಜಿತ್ ಪೆರ್ಲಂಪಾಡಿ ಯೊಂದಿಗೆ ನೀರಕಟ್ಟೆಯ ಆಶ್ರಫ್ ಹಾಗೂ ಯಶವಂತ್ ಬುಧವಾರ ತೀವ್ರವಾಗಿ ಶೋಧಕಾರ್ಯಾಚರಣೆ ನಡೆಸಿ ಸತ್ಯಪ್ರಕಾಶ್ ಅವರ ಮೃತದೇಹವನ್ನು ಪತ್ತೆ ಮಾಡಿದರು.
ಕಡಬ ತಹಸೀಲ್ದಾರ್ ಜಾನ್ ಪ್ರಕಾಸ್ ರೋಡ್ರಿಗಸ್, ಆರ್‍ಐ ಕೊರಗಪ್ಪ ಹೆಗ್ಡೆ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ತಾಪಂ ಸದಸ್ಯೆ ತೇಜಸ್ವಿನಿ ಶೇಖರ್, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭೇಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬೆಳ್ಳಾರೆ ಠಾಣೆಯ ಎಸ್‍ಐ ಎಂ.ವಿ. ಚೆಲುವಯ್ಯ ನೇತೃತ್ವದಲ್ಲಿ ಪೊಲೀಸ್ ತಂಡ ನಿರಂತರವಾಗಿ ಅಗ್ನಿಶಾಮಕ ದಳ ನಿರಂತರವಾಗಿ ಮುಳುಗುತಜ್ಞರಿಗೆ ಸಹಕರಿಸಿತ್ತು.