×
Ad

ಗೌರಿ ಲಂಕೇಶ್ ಹತ್ಯೆ: ರಾಜಕೀಯ, ಸಾಮಾಜಿಕ, ಪತ್ರಿಕೋದ್ಯಮದ ಪ್ರಮುಖರಿಂದ ಟ್ವಿಟ್ಟರ್ ನಲ್ಲಿ ಆಕ್ರೋಶ

Update: 2017-09-06 21:11 IST

ಪತ್ರಕರ್ತೆ, ಚಿಂತಕಿ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಗೌರಿಯವರನ್ನು ಹತ್ಯೆಗೈದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿರುವ ರಾಜಕೀಯ, ಸಾಮಾಜಿಕ, ಪತ್ರಿಕೋದ್ಯಮದ ಪ್ರಮುಖರು ಮಾಡಿರುವ ಟ್ವೀಟ್ ಗಳು ಈ ಕೆಳಗಿನಂತಿವೆ.

  • ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆ ತುಂಬ ದುಃಖವನ್ನುಂಟು ಮಾಡಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಅತ್ಯಂತ ಎಚ್ಚರಿಕೆಯನ್ನು ನೀಡಿರುವ ಘಟನೆಯೂ ಹೌದು. ನಮಗೆ ನ್ಯಾಯ ಬೇಕು.

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

  • ಗೌರಿ ನನ್ನ ಪತ್ರಿಕೋದ್ಯಮದ ದಿನಗಳ ಹಳೆಯ ಸಹೋದ್ಯೋಗಿಯಾಗಿದ್ದರು. ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸುವಂತೆ ಕರ್ನಾಟಕದ ಮುಖ್ಯಮಂತ್ರಿಗಳನ್ನು ನಾನು ಆಗ್ರಹಿಸುತ್ತಿದ್ದೇನೆ.

ರಾಜೀವ ಶುಕ್ಲಾ, ಐಪಿಎಲ್ ಅಧ್ಯಕ್ಷ

  • ದಾಭೋಲ್ಕರ್,ಪನ್ಸಾರೆ,ಕಲಬುರ್ಗಿ....ಈಗ ಗೌರಿ ಲಂಕೇಶ. ಒಂದು ವರ್ಗಕ್ಕೆ ಸೇರಿದ ಜನರು ಕೊಲೆಯಾಗುತ್ತಿದ್ದರೆ ಹಂತಕರು ಯಾವ ವರ್ಗದವರು?

ಜಾವೇದ್ ಅಖ್ತರ್, ಖ್ಯಾತ ಕವಿ

  • ಗೌರಿ ಲಂಕೇಶರನ್ನು ಅವರ ಮನೆಯ ಹೊರಗೇ ಹತ್ಯೆ ಮಾಡಲಾಗಿದೆ. ಇದು ನಿಜಕ್ಕೂ ಆಘಾತಕಾರಿ,ವಿನಾಶಕಾರಿ. ದಾಭೋಲ್ಕರ್,ಪನ್ಸಾರೆ,ಕಲಬುರ್ಗಿ ಅವರ ಹಂತಕರಿಗೆ ಶಿಕ್ಷೆಯಾಗಲೇಬೇಕು.

ಶಬಾನಾ ಆಝ್ಮಿ, ಹಿರಿಯ ಬಾಲಿವುಡ್ ನಟಿ

  • ಪತ್ರಕರ್ತೆ ಮತ್ತು ಹಿಂದುತ್ವ ರಾಜಕೀಯದ ಟೀಕಾಕಾರರಾಗಿದ್ದ ಗೌರಿ ಲಂಕೇಶರನ್ನು ಹತ್ಯೆ ಮಾಡಲಾಗಿದೆ. ಇದು ಅತ್ಯಂತ ಆತಂಕಕಾರಿ.

ರಾಜದೀಪ ಸರ್ದೇಸಾಯಿ, ಖ್ಯಾತ ಪತ್ರಕರ್ತ

  • ಬಲಪಂಥೀಯರು ವಿಜೃಂಭಿಸುತ್ತಿದ್ದಾರೆ. ನಮ್ಮ ಸ್ವಾತಂತ್ರ ಮತ್ತು ಸಂವಿಧಾನಕ್ಕೆ ಈಗ ಅಧಿಕೃತ ಬೆದರಿಕೆಯಿದೆ. ಗೌರಿ ಲಂಕೇಶ ಆತ್ಮಕ್ಕೆ ಶಾಂತಿ ದೊರೆಯಲಿ.

ತಹ್ಸೀನ್ ಪೂನಾವಾಲಾ, ಅಂಕಣಕಾರ ಮತ್ತು ಮಾಡೆಲ್

  • ಈ ದೇಶದ ಪ್ರತಿಯೊಂದು ರಸ್ತೆಯಲ್ಲಿಯೂ ಓರ್ವ ಗೋಡ್ಸೆ ಇದ್ದಾನೆ. ಪ್ರತಿಯೊಂದೂ ಸಂಭಾವ್ಯ ಬಲಪಂಥೀಯ ಗುಂಪಿನಿಂದ ಅವರಿಗೆ(ಗೌರಿ ಲಂಕೇಶ) ಬೆದರಿಕೆಗಳು ಬಂದಿದ್ದವು. ಭಾರತಕ್ಕೆ ಇನ್ನೂ ನಾಚಿಕೆಯಿದೆಯೇ?

ರಾಣಾ ಅಯ್ಯೂಬ್, ಪತ್ರಕರ್ತೆ ಮತ್ತು ಲೇಖಕಿ

  • ನಂಬಲು ಸಾಧ್ಯವಾಗುತ್ತಿಲ್ಲ. ಗೌರಿ ಲಂಕೇಶ ಹಿಂದುತ್ವ ರಾಜಕೀಯದ ವಿರುದ್ಧ ನಿರ್ಭೀತ ಧ್ವನಿಯಾಗಿದ್ದರು. ಈ ಕರಾಳ ಸುದ್ದಿಯನ್ನು ಕೇಳಿ ಹೃದಯ ಒಡೆದುಹೋಗಿದೆ.

ಸಾಗರಿಕಾ ಘೋಷ್, ಪತ್ರಕರ್ತೆ

  • ಸತ್ಯದ ಧ್ವನಿಯನ್ನೆಂದಿಗೂ ಅಡಗಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ ನಮ್ಮ ಹೃದಯಗಳಲ್ಲಿ ಅಮರರಾಗಿರುತ್ತಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ದುಷ್ಕರ್ಮಿಗಳಿಗೆ ಶಿಕ್ಷೆಯಾಗಲೇಬೇಕು.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

  • ಅವರೆಲ್ಲ ಬಲಪಂಥೀಯ ಧಾರ್ಮಿಕ ಮೂಲಭೂತವಾದಿಗಳ ವಿರುದ್ಧದ ಕಟ್ಟರ್, ನಿರ್ಭಿಡೆಯ ಟೀಕಾಕಾರರಾಗಿದ್ದರು. ಗೌರಿ ಲಂಕೇಶ ಹತ್ಯೆಗೆ ಇದು ಕಾರಣ.

ದಿಗ್ವಿಜಯ ಸಿಂಗ್, ಹಿರಿಯ ಕಾಂಗ್ರೆಸ್ ನಾಯಕ

  • ಪನ್ಸಾರೆ,ಕಲಬುರ್ಗಿ ಮತ್ತು ಈಗ ಗೌರಿ ಲಂಕೇಶ. ಅದೇ ವಿಧಾನ:ಹಂತಕರೆಲ್ಲ ಮುಸುಕು ಧರಿಸಿದ್ದರು. ಅದೇ ಉದ್ದೇಶ: ಭಿನ್ನ ಧ್ವನಿಯನ್ನು ಅಡಗಿಸುವುದು? ಅವೇ ಶಕ್ತಿಗಳು?

ಯೋಗೇಂದ್ರ ಯಾದವ್, ಸಾಮಾಜಿಕ ಕಾರ್ಯಕರ್ತ

  • ಆಘಾತವುಂಟಾಗಿದೆ,ಸಿಟ್ಟೂ ಬಂದಿದೆ. ದಾಭೋಲ್ಕರ್,ಪನ್ಸಾರೆ,ಕಲಬುರ್ಗಿ ಬಳಿಕ ಈಗ ಗೌರಿ ಲಂಕೇಶ. ಸಂಘ ಪರಿವಾರದ ವಿರುದ್ಧ ಎದೆಗಾರಿಕೆಯಿಂದ ಬರೆಯುತ್ತಿದ್ದ ಪತ್ರಕರ್ತೆ ಬೆಂಗಳೂರಿನಲ್ಲಿ ಗುಂಡಿಗೆ ಬಲಿಯಾಗಿದ್ದಾರೆ.

ಕವಿತಾ ಕೃಷ್ಣನ್, ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಸಿಪಿಎಂ ನಾಯಕಿ

  • ಗೌರಿ ಲಂಕೇಶರನ್ನು ಹತ್ಯೆ ಮಾಡಿರುವ ಹೇಡಿ ಕೃತ್ಯ ತೀವ್ರ ಆಘಾತ,ದುಃಖವನ್ನು ತಂದಿದೆ. ಅವರು ನನಗೆ ತಾಯಿಯಂತಿದ್ದರು. ಅವರು ನನ್ನ ಹೃದಯದಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ

ಕನ್ಹಯ್ಯ ಕುಮಾರ್, ಜೆಎನ್‌ಯು ವಿದ್ಯಾರ್ಥಿ ನಾಯಕ

  • ಭಾರತದಲ್ಲಿ ನಾವು ರಾಮ ರಹೀಮ್‌ರಂತಹ ವಂಚಕರಿಗೆ ತಲೆ ಬಾಗುತ್ತೇವೆ ಮತ್ತು ಪನ್ಸಾರೆ,ದಾಭೋಲ್ಕರ್,ಕಲಬುರ್ಗಿ ಮತ್ತು ಈಗ ಗೌರಿಲಂಕೇಶ.....ಹೀಗೆ ವಿಚಾರವಾದಿ ಗಳನ್ನು ಕೊಲ್ಲುತ್ತಿದ್ದೇವೆ.

ಬರ್ಖಾ ದತ್, ಟಿವಿ ಪತ್ರಕರ್ತೆ

  • ನವಭಾರತದಲ್ಲಿ ಖ್ಯಾತ ಪತ್ರಕರ್ತೆ ಮತ್ತು ಬಲಪಂಥೀಯ ರಾಜಕಾರಣದ ಟೀಕಾಕಾರರಾಗಿದ್ದ ಗೌರಿ ಲಂಕೇಶರ ಧ್ವನಿಯನ್ನು ಶಾಶ್ವತವಾಗಿ ಅಡಗಿಸಲಾಗಿದೆ. ಭಿನ್ನ ನಿಲುವಿನವರಿಗೆ ಇದು ಕರಾಳ ಕಾಲ. ಗೌರಿ ಆತ್ಮಕ್ಕೆ ಶಾಂತಿ ಸಿಗಲಿ.

ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News