×
Ad

ಗೌರಿ ಲಂಕೇಶ್ ಹತ್ಯೆಗೆ ಇಫ್ಕಾ ಖಂಡನೆ

Update: 2017-09-06 22:03 IST

ಉಡುಪಿ, ಸೆ.6: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ತೀವ್ರವಾಗಿ ಖಂಡಿ ಸಿರುವ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ(ಇಫ್ಕಾ), ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿದೆ.
ಕೊಲೆಗಡುಕರನ್ನು ವಿಶೇಷ ಪೊಲೀಸ್ ತಂಡ ರಚಿಸಿ ಪತ್ತೆ ಹಚ್ಚಬೇಕು ಮತ್ತು ಅವರನ್ನು ಗಲ್ಲಿಗೇರಿಸುವ ಮೂಲಕ ಗೌರಿ ಲಂಕೇಶ್‌ರ ಹತ್ಯೆಗೆ ನ್ಯಾಯ ಒದಗಿಸ ಬೇಕು ಎಂದು ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ನಿಕಟಪೂರ್ವ ಅಧ್ಯಕ್ಷ ಲೂಯಿಸ್ ಲೋಬೊ, ಕಾರ್ಯದರ್ಶಿ ನೇರಿ ಕರ್ನೆಲಿಯೊ, ಉಪಾಧ್ಯಕ್ಷರಾದ ಜಿಪಂ ಸದಸ್ಯ ವಿಲ್ಸನ್ ರೋಡಿಗ್ರಸ್, ತಾಪಂ ಸದಸ್ಯೆ ರೋಶಿನಿ ಒಲಿವೇರಾ, ಕೋಶಾಧಿಕಾರಿ ಬೊನ್ನಿಫಸ್ ಡಿಸೋಜ ಜಂಟಿ ಹೇಳಿಕೆಯನ್ನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News