×
Ad

ಖಾತೆಯಿಂದ ಹಣ ಡ್ರಾ ಮಾಡಿ ವಂಚನೆ

Update: 2017-09-06 22:05 IST

ಮಲ್ಪೆ, ಸೆ.6: ಅಪರಿಚಿತರೊಬ್ಬರು ಮಹಿಳೆಯ ಮೊಬೈಲ್‌ಗೆ ಕರೆ ಮಾಡಿ ಎಂಟಿಎಂ ನಂಬರ್ ಪಡೆದು ಖಾತೆಯಿಂದ ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ವರದಿಯಾಗಿದೆ.

  ಕೆಳಾರ್ಕಳಬೆಟ್ಟು ನಿವಾಸಿ ರಘುಪತಿ ನಾಯ್ಕ ಎಂಬವರ ಪತ್ನಿ ಭವಾನಿ ನಾಯ್ಕ ಎಂಬವರಿಗೆ ಸೆ.4ರಂದು ಸಂಜೆ ವೇಳೆ ಅಪರಿಚಿತರೊಬ್ಬರು ಸಂತೆಕಟ್ಟೆ ಬ್ಯಾಂಕ್ ಮ್ಯಾನೇಜರ್ ಎಂಬುದಾಗಿ ಹೇಳಿ ಕರೆ ಮಾಡಿ ‘ನಿಮ್ಮ ಎಟಿಎಂ ಕಾರ್ಡ್ ಲ್ಯಾಪ್ಸ್ ಆಗಿದ್ದು, ಕೂಡಲೇ ರಿನಿವಲ್ ಮಾಡಬೇಕು. ಅದಕ್ಕಾಗಿ ಎಟಿಎಂ ಕಾರ್ಡಿನ ನಂಬ್ರ ನೀಡಬೇಕು ಎಂದು ತಿಳಿಸಿದ್ದರು. ಅದರಂತೆ ಭವಾನಿ ಕಾರ್ಡಿನ ನಂಬರ್ ನೀಡಿದ್ದರು. ಕೂಡಲೇ ಅಪರಿಚಿತ ಭವಾನಿ ನಾಯ್ಕರ ಖಾತೆ ಯಿಂದ 20,000ರೂ. ಹಣವನ್ನು ಡ್ರಾ ಮಾಡಿ ಮೋಸ ಮಾಡಿದ್ದಾನೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News