ರಾಜ್ಯ ಜ್ಯೂನಿಯರ್, ಸೀನಿಯರ್ ಅಥ್ಲೆಟಿಕ್ಸ್ : ಆಳ್ವಾಸ್‍ಗೆ 15ನೇ ಬಾರಿ ಸಮಗ್ರ ಪ್ರಶಸ್ತಿ

Update: 2017-09-06 16:43 GMT

ಮೂಡುಬಿದಿರೆ,ಸೆ.6: ಕರ್ನಾಟಕ ರಾಜ್ಯ ಅಥ್ಲೇಟಿಕ್ಸ್ ಅಸೋಶಿಯೇಶನ್ ಹಾಗೂ ಆಳ್ವಾಸ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್‍ನಲ್ಲಿ ಮೂಡುಬಿದಿರೆ ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್ 545 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯುವುದರ ಮೂಲಕ 15ನೇ ಬಾರಿ ಚಾಂಪಿಯನ್ ಆಗಿ ಮೂಡಿ ಬಂದಿದೆ. 

ತಂಡ ಪ್ರಶಸ್ತಿಗಳು: 14 ವರ್ಷದೊಳಗಿನ ಬಾಲಕರ ವಿಭಾಗ, 16 ವರ್ಷದೊಳಗಿನ ಬಾಲಕರ ವಿಭಾಗ, 18 ವರ್ಷದೊಳಗಿನ ಹುಡುಗರ, ಹುಡುಗಿಯರ ವಿಭಾಗ, 20 ವರ್ಷದೊಳಗಿನ ಹುಡುಗ, ಹುಡುಗಿಯರ ವಿಭಾಗ, ಮಹಿಳಾ ಹಾಗೂ ಪುರುಷ ಎರಡೂ ವಿಭಾಗಳಲ್ಲೂ ಸಮಗ್ರ ತಂಡ ಪ್ರಶಸ್ತಿಯನ್ನು ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್ ಪಡೆದುಕೊಂಡಿದೆ. 
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಸ್ಪೋಟ್ರ್ಸ್ ಕ್ಲಬ್. 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 

ಉತ್ತಮ ಅಥ್ಲೆಟಿಕ್ಸ್ ಪ್ರಶಸ್ತಿ: 

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಸ್ಪೋಟ್ರ್ಸ್ ಕ್ಲಬ್‍ನ ನಿಯೊಲಾ ಅಣ್ಣ ಕರೊಲಿನ್, ಬಾಲಕರ ವಿಭಾಗದಲ್ಲಿ ಆಳ್ವಾಸ್‍ನ ಎಂ.ಡಿ ಮುನಾಫ್, 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ವರ್ಷಾ, ಬಾಲಕರ ವಿಭಾಗದಲ್ಲಿ ವಿದ್ಯಾನಗರ ಸ್ಪೋಟ್ರ್ಸ್ ಕ್ಲಬ್‍ನ ಶಶಿಕಾಂತ್ ವಿ.ಎ, 18 ವರ್ಷದೊಳಗಿನ ಹುಡುಗಿಯರ ವಿಭಾಗದಲ್ಲಿ ವಿದ್ಯಾನಗರ ಸ್ಪೋಟ್ರ್ಸ್ ಕ್ಲಬ್‍ನನ ಧನೇಶ್ವರಿ ಎ.ಟಿ, ಬಾಲಕರ ವಿಭಾಗದಲ್ಲಿ ಬೆಂಗಳೂರು ಆಲ್ ಅಮೀನ್ ಸಂಸ್ಥೆಯ ಲೋಕೇಶ್ ಎಸ್., 20 ವರ್ಷದೊಳಗಿನ ಹುಡುಗಿಯರ ವಿಭಾಗದಲ್ಲಿ ಎಸ್‍ಎಡಿಎಂ ಸ್ಪೋಟ್ಸ್ ಕ್ಲಬ್‍ನ ಸ್ನೇಹ ಎಸ್, ಹುಡುಗರ ವಿಭಾಗದಲ್ಲಿ ಉಡುಪಿ ಜಿಲ್ಲಾ ತಂಡದ ಮನೀಷ್, ಮಹಿಳಾ ವಿಭಾಗದಲ್ಲಿ ಕೆನರಾ ಬ್ಯಾಂಕ್‍ನ ಎಚ್.ಎನ್ ಜ್ಯೋತಿ, ಪುರುಷರ ವಿಭಾಗದಲ್ಲಿ ಆಳ್ವಾಸ್‍ನ ಅರುಣ್ ಬೇಬಿ ಉತ್ತಮ ಅಥ್ಲೇಟಿಕ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ. 

19 ಕೂಟ ದಾಖಲೆ: 

ಅಥ್ಲೆಟಿಕ್ಸ್‍ನ ಕೊನೆಯ ದಿನವಾದ ಬುಧವಾರ 8 ಹೊಸ ಕೂಟ ದಾಖಲೆಗಳಾಗಿದ್ದು, ಒಟ್ಟು 19 ನೂತನ ಕೂಟ ದಾಖಲೆಯನ್ನು ವಿವಿಧ ಸಂಸ್ಥೆಗಳ ಕ್ರೀಡಾಪಟುಗಳು ಮಾಡಿದ್ದಾರೆ. ಆಳ್ವಾಸ್‍ನ ನಾಗೇಂದ್ರ ಅಣ್ಣಪ್ಪ ನಾಯ್ಕ್( ಅಂಡರ್ 16-ಶಾಟ್‍ಪುಟ್), ಆಳ್ವಾಸ್ ಆಶೀಸ್ ಬಲೋಟಿಯ(ಅಂಡರ್ 18-ಶಾಟ್‍ಪುಟ್), ಆಳ್ವಾಸ್ ಮತ್ತೋರ್ವ ಕ್ರೀಡಾಪಟು ಮನು ಡಿ.ಪಿ(ಅಂಡರ್-18 ಜವಲಿನ್ ತ್ರೊ), ಆಳ್ವಾಸ್ ಯೋಗೀಶ್ ಪಟ್ಗಾರ್(ಅಂಡರ್ 20 ಪೋಲ್‍ವಾಲ್ಟ್), ಮೈಸೂರು ಡಿವೈಇಎಸ್ ತಂಡದ ಹರ್ಷಿತಾ ಡಬ್ಲ್ಯು.ಆರ್ ( ಹ್ಯಾಮರ್ ತ್ರೊ). ರಾಮನಗರ ಡಿಎಎ ಸಂಸ್ಥೆಯ ಖ್ಯಾತಿ( ಪೋಲ್‍ವಾಲ್ಟ್), ಆಳ್ವಾಸ್‍ನ ನಾಗಭೂಷಣ್( 400ಮೀ ಹರ್ಡಲ್ಸ್),  ವಿದ್ಯಾನಗರ ಸ್ಪೋಟ್ಸ್ ಕ್ಲಬ್‍ನ ಶಶಿಕಾಂತ್( ಅಂಡರ್ 16-200ಮೀ ಓಟ) ಕೊನೆಯ ದಿನ ಹೊಸ ಕೂಟ ದಾಖಲೆಗಳನ್ನು ಮಾಡುವುದರೊಂದಿಗೆ 19 ಕೂಟ ದಾಖಲೆಗಳಾಗಿವೆ.
ಇಲ್ಲಿಯವರೆಗೆ ನಡೆದ ರಾಜ್ಯ ಜ್ಯೂನಿಯರ್, ಸೀನಿಯರ್ ಅಥ್ಲೆಟಿಕ್ಸ್ ನಲ್ಲೇ 2250 ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿರುವುದು ಹೊಸ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News