ವಿಚಾರಧಾರೆ ಎದುರಿಸಲಾಗದ ಹೇಡಿಗಳ ಕೃತ್ಯ: ಎನ್‍ಡಬ್ಲ್ಯುಎಫ್

Update: 2017-09-06 16:45 GMT

ಬಂಟ್ವಾಳ, ಸೆ. 6: ರಾಜ್ಯದ ಖ್ಯಾತ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್‍ರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ನ್ಯಾಷನಲ್ ವುಮೆನ್ಸ್ ಫ್ರಂಟ್, ಗೌರಿ ಲಂಕೇಶ್‍ರವರ ವಿಚಾರಧಾರೆಗಳನ್ನು ಎದುರಿಸಲಾಗದ ಹೇಡಿಗಳ ಕೃತ್ಯ ಇದಾಗಿದೆ ಎಂದು ತಿಳಿಸಿದೆ. 
ಓರ್ವ ಮಹಿಳಾ ವಿಚಾರವಾದಿಯನ್ನು ಗುಂಡಿಕ್ಕಿ ಹತ್ಯೆಗೈಯುವಷ್ಟು ನೀಚ ಕೆಲಸಕ್ಕೆ ಹಂತಕರು ಇಳಿದಿದ್ದಾರೆ. ಗೌರಿ ಲಂಕೇಶ್‍ರವರು ಪತ್ರಕರ್ತೆ ಮಾತ್ರವಾಗಿರದೆ ರಾಜ್ಯದ ಮುಂಚೂಣೀಯಲ್ಲಿದ್ದ ಮಹಿಳಾ ಹೋರಾಟಗಾರ್ತಿಯಾಗಿದ್ದರು. ಗೌರಿಯವರ ಹತ್ಯೆ ಮೂಲಕ ಇತರ ಹೋರಟಗಾರರನ್ನು ಬೆದರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಗೌರಿಯವರನ್ನು ಕೊಲ್ಲಬಹುದೇ ವಿನಹ ಅವರ ವಿಚಾರಧಾರೆಗಳನ್ನು ಅಲ್ಲ ಎಂದಿರುವ ಎನ್‍ಡಬ್ಲ್ಯುಎಫ್ ಆರೋಪಿಗಳು ಎಷ್ಟೇ ಪ್ರಭಲರಾಗಿದ್ದರೂ ಕೂಡಾ ಅವರನ್ನು ಆದಷ್ಟು ಶೀರ್ಘದಲ್ಲಿ ಬಂಧಿಸಬೇಕಾಗಿದೆ ಮತ್ತು ಹತ್ಯೆ ಹಿಂದೆ ಇರುವ ಎಲ್ಲ ಸಂಚುಕೋರರನ್ನು ಬಂಧಿಸಬೇಕೆಂದು ಆಗ್ರಹಿಸಿದೆ. 
----------------------------

ಗೌರಿ ಲಂಕೇಶ್ ಹತ್ಯೆ : ಎನ್‍ಸಿಎಚ್‍ಆರ್‍ಒ ಖಂಡನೆ 
ಜನಪರ ಚಿಂತನೆಯ ಖ್ಯಾತ ಪತ್ರಕರ್ತೆ ಮತ್ತು ಸಾಮಾಜಿಕ ಶಾಂತಿಯ ಪ್ರತಿಪಾದಕಿ ಗೌರಿ ಲಂಕೇಶ್ ಹತ್ಯೆಯು ಮಾನವ ಹಕ್ಕುಗಳ ಪರ ಧ್ವನಿಯನ್ನು ಅಡಗಿಸುವ ಕೃತ್ಯವಾಗಿದೆ ಎಂದು ನ್ಯಾಷನಲ್ ಕಾನ್ಪರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೇಶನ್ ಖಂಡಿಸಿದೆ. 
ವಿಚಾರವಾದಿಗಳ ಕೊಲೆ ದೇಶದಲ್ಲಿ ಕೋಮುವಾದಿಗಳ ಹಟ್ಟಹಾಸವನ್ನು ಮತ್ತೆ ಸಾಬೀತು ಪಡಿಸಿದೆ. ಮನುವಾದಿಗಳ ಸೈದಾಂತಿಕ ಅಸಹಿಷ್ಣುತೆಯ ಮಾನವ ಹಕ್ಕು ವಿರೋಧಿ ಕೃತ್ಯಗಳಿಗೆ ಕಡಿವಾಣ ಇಲ್ಲದಿದ್ದರೆ ಮುಂದೆಯೂ ಇಂತಹ ಹತ್ಯೆಗಳು ಮರುಕಳಿಸಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಎನ್‍ಸಿಎಚ್‍ಆರ್‍ಒ, ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಎನ್‍ಸಿಎಚ್‍ಆರ್‍ಒ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕಕ್ಕಿಂಜೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News