×
Ad

ತ್ರಿವಳಿ ತಲಾಖ್ ವಿವರಣಾ ಸಮಾವೇಶ, ಸ್ನೇಹ ಸಂವಾದ ಕಾರ್ಯಕ್ರಮ

Update: 2017-09-07 17:39 IST

ಮಂಗಳೂರು, ಸೆ. 7: ದ.ಕ. ಜಿಲ್ಲಾ ಸುನ್ನೀ ಜಂಇಯತುಲ್ ಉಲಮಾ ವತಿಯಿಂದ ತ್ರಿವಳಿ ತಲಾಖ್ ವಿವರಣಾ ಸಮಾವೇಶ ಮತ್ತು ಸ್ನೇಹ ಸಂವಾದ ಕಾರ್ಯಕ್ರಮವು ಸೆ. 9ರಂದು ಬೆಳಗ್ಗೆ  10 ಗಂಟೆಗೆ  ಮಂಗಳೂರು ಸೂರ್ಯ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.

ಅಲ್ ಹಾಜ್ ಮುಹಮ್ಮದಲಿ ಫೈಝಿ ಬಾಳೆಪುಣಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಲಿದ್ದು, ಯು.ಕೆ. ಮುಹಮ್ಮದ್ ಸಅದಿ ವಳವೂರು ಉದ್ಘಾಟಿಸಲಿದ್ದಾರೆ. ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ದಿಕ್ಸೂಚಿ ಭಾಷಣ ಹಾಗೂ ಟಿ.ಯಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಾಲೆಮುಂಡೋವು ಮಹ್ಮೂದುಲ್ ಫೈಝಿ, ಇಬ್ರಾಹಿಂ ಫೈಝಿ ಕನ್ಯಾನ, ಇಬ್ರಾಹಿಂ ಮದನಿ ಮಂಚಿ, ಖಾಸಿಂ ಮುಸ್ಲಿಯಾರ್ ಕರಾಯ, ಆದಂ ಅಹ್ಸನಿ, ಡಿಕೆ ಉಮರ್ ಸಖಾಫಿ, ಕಂಬಳ ಬೆಟ್ಟು, ಅಬ್ದುರ್ರಶೀದ್ ಝೈನಿ ಸಖಾಫಿ, ಜಿ.ಯಂ. ಮುಹಮ್ಮದ್ ಕಾಮಿಲ್ ಸಖಾಫಿ, ಆತೂರು ಸಅದ್ ಮುಸ್ಲಿಯಾರ್, ಕೆಕೆಯಂ ಕಾಮಿಲ್ ಸಖಾಫಿ, ಸಿದ್ದೀಖ್ ಸಖಾಫಿ ಮೂಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News