ಸಚಿವ ಖಾದರ್ ಆಪ್ತಸಹಾಯಕ ಲಿಬ್ಝತ್‍ಗೆ ಸನ್ಮಾನ
Update: 2017-09-07 18:47 IST
ಕಾಸರಗೋಡು, ಸೆ. 7: ಜಿಲ್ಲೆಯ ಕಿಳಿಂಗಾರಿನಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ಬಡವರಿಗೆ ನಿರ್ಮಿಸಿದ 245-246ನೆ ಮನೆ ಹಸ್ತಾಂತರ ಸಂದರ್ಭ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಅವರ ಆಪ್ತ ಸಹಾಯಕ ಮುಹಮ್ಮದ್ ಲಿಬ್ಝತ್ ರನ್ನು ಸಾಯಿರಾಂ ಗೋಪಾಲಕೃಷ್ಣ ಭಟ್ ಕುಟುಂಬಸ್ಥರು ಸನ್ಮಾನಿಸಿದರು.
ಈ ಸಂದರ್ಭ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃಧ್ಧಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಭಟ್, ಪ್ರೊ. ಶ್ರೀನಾಥ್, ಲತೀಫ್ ಕಂದಕ್, ಖಾದರ್, ನಾಸಿರ್, ಕುಂಞ ವಿದ್ಯಾನಗರ, ಶಾರದಾ ಸಾಯಿರಾಂ ಭಟ್, ಶೀಲಾ ಕೃಷ್ಣ ಭಟ್, ವೇಣುಗೋಪಾಲ್, ಮಧುರಾ ಮತ್ತಿತರರು ಉಪಸ್ಥಿತರಿದ್ದರು.