×
Ad

ಹೆಲ್ಮೆಟ್ ಧರಿಸಲು ಅಭಿಯಾನ

Update: 2017-09-07 19:09 IST

ಮಂಗಳೂರು, ಸೆ.7: ನಗರ ಪೊಲೀಸ್ ಸಹಯೋಗದೊಂದಿಗೆ ರೆಡ್ ಎಫ್‌ಎಂ 93.5 ವತಿಯಿಂದ ಸಂಚಾರ ಅರಿವು ಮೂಡಿಸಲು ರೆಡ್ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

15 ದಿನಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದಿರುವುದರಿಂದ ಆಗುವ ಅಪಾಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಸಂದರ್ಭ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರಿಗೆ ರೆಡ್ ಎಫ್‌ಎಂ ವತಿಯಿಂದ ಉಚಿತವಾಗಿ ಹೆಲ್ಮೆಟ್ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News