ಶಿಕ್ಷಣದೊಂದಿಗೆ ಮೌಲ್ಯವನ್ನು ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ
ಉಡುಪಿ, ಸೆ.7: ಕಾಲೇಜು ಶಿಕ್ಷಣದೊಂದಿಗೆ ಸಮಾಜ ಸೇವೆ, ಪರಿಸರ ಕಾಳಜಿ, ರಾಷ್ಟ್ರಪ್ರೇಮ ಮುಂತಾದ ವೌಲ್ಯಗಳನ್ನು ಅಳವಡಿಸಿಕೊಂಡಾಗ ಮುಂದಿನ ವೃತ್ತಿಪರ ಜೀವನದಲ್ಲಿ ಹೆಚ್ಚಿನ ನೆಮ್ಮದಿ ಹಾಗೂ ಸಂತೋಷವನ್ನು ಕಾಣಬಹುದು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸ್ಕೌಟ್ ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲ ಪ್ರಗತಿನಗರದ ಡಾ.ವಿ.ಎಸ್ ಅಚಾರ್ಯ ಸ್ಕೌಟ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಬೆಂಗಳೂರು-ಮೈಸೂರು ವಿಭಾಗೀಯ ಮಟ್ಟದ ಪಯೋನಿಯರಿಂಗ್ ಮತ್ತು ಸಾಹಸ ಶಿಬಿರದ ಸಮಾರೋಪ ಸಮಾರಂದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮಣಿಪಾಲ ಪ್ರಗತಿನಗರದ ಡಾ.ವಿ.ಎಸ್ ಅಚಾರ್ಯ ಸ್ಕೌಟ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಬೆಂಗಳೂರು-ಮೈಸೂರು ವಿಭಾಗೀಯ ಮಟ್ಟದ ಪಯೋನಿಯರಿಂಗ್ ಮತ್ತು ಸಾಹಸ ಶಿಬಿರದ ಸಮಾರೋಪ ಸಮಾರಂದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ನಿರ್ದೇಶಕ ಪ್ರಕಾಶ್ಚಂದ್ರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಿಲ್ಲಾ ಸ್ಕೌಟ್ ಆಯುಕ್ತ ಡಾ.ವಿಜೇಂದ್ರ ವಿ. ರಾವ್ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಾಂತಾ ವಿ.ಎಸ್ ಅಚಾರ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಜ್ಯೋತಿ ಜೆ.ಪೈ, ಐಕೆ ಜಯಚಂದ್ರ, ಸಾವಿತ್ರಿ ಮನೋಹರ್, ಡಾ.ಜಯರಾಮ್ ಶೆಟ್ಟಿಗಾರ್ ಹಾಗೂ ಶಿಬಿರಾಧಿಕಾರಿಗಳಾದ ಡೇನಿಯಲ್ ಸುಕುಮಾರ್, ಡಾ.ರವಿ ಎಂ ಎನ್, ನಿಥಿನ್ ಅಮಿನ್, ಫ್ಲೋರಿನ್ ಡಿಸಿಲ್ವ, ಸುಮನ್ ಶೇಖರ್ ಹಾಗೂ ಎಂ ಸುರೇಶ್ ಉಪಸ್ಥಿತರಿದ್ದರು. ಆನಂದ ಅಡಿಗ ಕಾರ್ಯಕ್ರಮ ನಿರೂಪಿಸಿದರು.