×
Ad

ಚಲಿಸುವ ರೈಲಿನಲ್ಲಿ ಸೆಲ್ಫಿ ಬೇಡ

Update: 2017-09-07 21:05 IST

ಉಡುಪಿ, ಸೆ.7: ಮಂಗಳೂರು- ಮಡಂಗಾವ್ ನಡುವೆ ಸಂಚರಿಸುವ ರೈಲು ಸಂಖ್ಯೆ 56640ರ ಬಾಗಿಲಲ್ಲಿ ನಿಂತು ರೈಲು ಉಡುಪಿ ನಿಲ್ದಾಣದಿಂದ ಹೊರಡು ವಾಗ ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ತಮಿಳುನಾಡು ಮೂಲದ ಬ್ಯಾಂಕ್ ಉದ್ಯೋಗಿ ಸಂತೋಷ್ ಕುಮಾರ್ ಎಂಬವರು ಮೊಬೈಲ್ ಮೂಲಕ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದು, ಇವರನ್ನು ಉಡುಪಿ ರೈಲ್ವೆ ಪೊಲೀಸ್ ಪಡೆಯ ಇನ್ಸ್‌ಪೆಕ್ಟರ್ ಶಿವರಾಮ್ ರಾಠೋಡ್ ಮತ್ತು ಪೇದೆ ಗುರುರಾಜ್ ರಕ್ಷಿಸಿ, ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ಚಲಿಸುತ್ತಿರುವ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಬಿದ್ದರೆ ಪ್ರಾಣಾಪಾಯ ಅಥವಾ ಶಾಶ್ವತ ಅಂಗವಿಕಲತೆಯ ಸಾಧ್ಯತೆಯಿರುವುದರಿಂದ ಪ್ರಯಾಣಿಕರು ಎಚ್ಚರಿಕೆ ವಹಿಸುವಂತೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News