ರೈತರ ಸ್ಥಿತಿ ಸುಧಾರಣೆಗೆ ಕೇಂದ್ರದಿಂದ ಮಹತ್ವದ ಕ್ರಮ: ಶೋಭಾ
ಉಡುಪಿ, ಸೆ. 7: ದೇಶದ ರೈತರ ಪರಿಸ್ಥಿತಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪಮಾಡಿದ್ದು, ಮುಂದಿನ 5 ವರ್ಷಗಳಲ್ಲಿ ಕೃಷಿ ಆದಾಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಉಡುಪಿ ಸಂಸೆ ಶೋಬಾ ಕರಂದ್ಲಾಜೆ ಹೇಳಿದ್ದಾರೆ.
ಅಂಬಲಪಾಡಿಯ ಪ್ರಗತಿಸೌಧದಲ್ಲಿ ಗುರುವಾರ ‘ನವಭಾರತ ಮಂಥನ: ಸಂಕಲ್ಪಸಿದ್ಧಿ’ 2022ರೊಳಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ 7 ಅಂಶಗಳ ಕಾರ್ಯಕ್ರಮಕ್ಕೆ ಚಾಲೆ ನೀಡಿ ಅವರು ಮಾತನಾಡುತಿದ್ದರು.
ಅಂಬಲಪಾಡಿಯ ಪ್ರಗತಿ ಸೌದಲ್ಲಿಗುರುವಾರ ‘ನವಾರತ ಮಂಥನ: ಸಂಕಲ್ಪಸಿದ್ಧಿ’ 2022ರೊಳಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ 7 ಅಂಶಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಹಸಿರು ಕ್ರಾಂತಿಯಿಂದ ಅನ್ನದ ಕೊರತೆ ನೀಗಿ, ಭಾರತ ಆಹಾರದಲ್ಲಿ ಸ್ವಾವಲಂಬಿಯಾದರೂ ರಾಸಾಯನಿಕ ಗೊಬ್ಬರದಿಂದ ನಾವು ತಿನ್ನುವ ಆಹಾರ ವಿಷಯುಕ್ತವಾಗಿದೆ. ಇದರಿಂದ ಬೇರೆ ಬೇರೆ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದುದರಿಂದ ಸಾವಯವ ಕೃಷಿ ಪದ್ಧತಿಯನ್ನು ನಾವು ಹೆಚ್ಚೆಚ್ಚು ಪ್ರೋತ್ಸಾಹಿಸಬೇಕಿದೆ ಎಂದವರು ಹೇಳಿದರು.
ಸ್ವಾತಂತ್ರ ಬಂದು ಏಳು ದಶಕಗಳಾದರೂ ದೇಶದ ರೈತ ಈಗಲೂ ಸಂಕಷ್ಟ ಅನುವಿಸುತ್ತಿದ್ದಾನೆ. ಹಿಡುವಳಿ ಹೆಚ್ಚಾದರೂ ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ರೈತರ ಜೀವನಮಟ್ಟ ಸುಧಾರಣೆ ಅವಶ್ಯಕವಾಗಿದ್ದು, ಆ ದೆಸೆಯಲ್ಲಿ ಪ್ರಧಾನಿಯವರ ಈ ಯೋಜನೆ ಮಹತ್ವದ್ದಾಗಿದೆ ಎಂದರು.
ಸ್ವಾತಂತ್ರ ಬಂದು ಏಳು ದಶಕಗಳಾದರೂ ದೇಶದ ರೈತ ಈಗಲೂ ಸಂಕಷ್ಟ ಅನುವಿಸುತ್ತಿದ್ದಾನೆ. ಹಿಡುವಳಿ ಹೆಚ್ಚಾದರೂ ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ರೈತರ ಜೀವನಮಟ್ಟ ಸುಧಾರಣೆ ಅವಶ್ಯಕವಾಗಿದ್ದು, ಆ ದಿಸೆಯಲ್ಲಿ ಪ್ರಧಾನಿಯವರ ಈ ಯೋಜನೆ ಮಹತ್ವದ್ದಾಗಿದೆ ಎಂದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್. ಗೌಡ, ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಎ.ಎಸ್.ಕುಮಾರಸ್ವಾಮಿ, ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್, ವಿಸ್ತರಣಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಂಥೋನಿ ಮರಿಯ ಇಮ್ಯಾನಿಯಲ್ ಎಂ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪಿ.ಕೆ. ಪುರುಷೋತ್ತಮ್ ಉಪಸ್ಥಿತರಿದ್ದರು. ಧನಂಜಯ ಸ್ವಾಗತಿಸಿದರು.