×
Ad

'ಗೌರಿ ಲಂಕೇಶ ಪ್ರಕರಣ ಸಿಬಿಐಗೆ ನೀಡಿದರೆ ಸತ್ಯಾಂಶ ಹೊರಗೆ'

Update: 2017-09-07 22:02 IST

ಉಡುಪಿ, ಸೆ.7: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ತನ್ನನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಉಡುಪಿಯಲ್ಲಿಂದು ಮಾತನಾಡಿದ ಅವರು, ರಾಜ್ಯದ ಜನತೆ ಸಹ ಇದನ್ನು ಪ್ರತಿಪಾದಿಸುತಿದ್ದಾರೆ. ರಾಜ್ಯದ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಆದರೆ ರಾಜ್ಯ ಸರಕಾರ ಹಾಗೂ ಗೃಹ ಇಲಾಖೆಯ ಮೇಲೆ ನಂಬಿಕೆ ಇಲ್ಲ. ಗಣಪತಿ ಪ್ರಕರಣವೇ ಇದಕ್ಕೆ ಸಾಕ್ಷಿ ಎಂದವರು ನುಡಿದರು.

ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂದ ಅವರು ರಾಜ್ಯದಲ್ಲಿ ಇಂಟೆಲಿಜೆನ್ಸ್ ಎಂಬುದೇ ಇಲ್ಲವಾಗಿದೆ. ಇಂಟೆಲಿಜೆನ್ಸ್ ವೈಫಲ್ಯವೇ ಗೌರಿ ಲಂಕೇಶರ ಹತ್ಯೆಗೆ ಕಾರಣ. ಕಾನೂನು ವಿಷಯದಲ್ಲಿ ಕರ್ನಾಟಕ, ಹಿಂದಿನ ಬಿಹಾರದಂತಾಗಿದೆ ಎಂದವರು ರಾಜ್ಯ ಸರಕಾರವನ್ನು ಕಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News