ಗ್ರೆನೇಡ್ ಎಸೆದ ಉಗ್ರರು
Update: 2017-09-07 23:21 IST
ಶ್ರೀನಗರ, ಸೆ. 7: ಜಹಾಂಗೀರ್ ಚೌಕ್ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಭದ್ರತಾ ಪಡೆಯ ವಾಹನದ ಮೇಲೆ ಉಗ್ರರು ಹ್ಯಾಂಡ್ ಗ್ರೆನೇಡ್ ಎಸೆದ ಪರಿಣಾಮ ಓರ್ವ ಮೃತಪಟ್ಟು 14 ಮಂದಿ ಗಾಯಗೊಂಡಿದ್ದಾರೆ.
ಗ್ರೆನೇಡ್ ರಸ್ತೆಯಲ್ಲಿ ಸ್ಫೋಟಗೊಂಡಿತು. ಇದರಿಂದ ಓರ್ವ ಉಗ್ರ ಗಂಭೀರ ಗಾಯಗೊಂಡ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.