ಪತ್ರಿಕೆಯನ್ನು ಧಮನಿಸುವ ಸಂಚು: ಕಬೀರ್ ಕಾಟಿಪಳ್ಳ
Update: 2017-09-08 17:47 IST
ಮಂಗಳೂರು, ಸೆ. 8: ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸತ್ಯಾ ಸತ್ಯತೆಯನ್ನು ವರದಿ ನೀಡಿದ 'ವಾರ್ತಾಭಾರತಿ' ಪತ್ರಿಕೆಯ ವರದಿಗಾರನನ್ನು ಬಂಧಿಸಿದ ಪೊಲೀಸರ ವರ್ತನೆಯಲ್ಲಿ ಅನುಮಾನ ಮೂಡುತ್ತಿದೆ. ಇದು ಜಿಲ್ಲೆಯ ಸತ್ಯಾ ಸತ್ಯತೆಯನ್ನು ವರದಿ ನೀಡುವ ಪತ್ರಿಕೆಯನ್ನು ಧಮನಿಸುವ ಸಂಚು. ನಿನ್ನೆ ಪೊಲೀಸ್ ಅಧಿಕಾರಿಗೆ ಬೆದರಿಕೆ ಕೊಟ್ಟಿದ ದಕ್ಷಿಣ ಕನ್ನಡ ಸಂಸದರನ್ನು ಬಂಧಿಸಲಿ. ಆ ಕೆಲಸವನ್ನು ಮಾಡದೆ ವರದಿಗಾರರನ್ನು, ಜನಸಾಮಾನ್ಯರನ್ನು ಬಂಧಿಸುವುದು ಖಂಡನಿಯ ಎಂದು ಆಪ್ ಜಿಲ್ಲಾ ಮುಖಂಡ ಕಬೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.