ಸೆ.10: ಪರ್ಲಿಯ ನೂರಾನಿಯಾ ಎಸೋಸಿಯೇಶನ್ ವತಿಯಿಂದ ರಕ್ತದಾನ
Update: 2017-09-08 17:52 IST
ಬಂಟ್ವಾಳ, ಸೆ. 8: ನೂರಾನಿಯಾ ಎಸೋಸಿಯೇಶನ್ ಪರ್ಲಿಯಾ ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಸೆ.10 ರಂದು ಪರ್ಲಿಯಾ ನೂರಾನಿಯಾ ಕಚೇರಿಯಲ್ಲಿ ನಡೆಯಲಿದೆ.
ಉದ್ಘಾಟನೆಯನ್ನು ಡಾ. ಜಗದೀಶ್ ರೈ ವಹಿಸಲಿದ್ದಾರೆ, ಮುಖ್ಯ ಅಥಿತಿಗಳಾಗಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಕಂದರ್ ಪಾಷಾ, ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಇರ್ಫಾನ್, ಪರ್ಲಿಯಾ ನರ್ಸಿಂಗ್ ಹೋಂ ವೈದ್ಯಾಧಿಕಾರಿ ಡಾ. ಇಕ್ಬಾಲ್, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ರಿಯಾಝ್ ಹುಸೈನ್, ಪರ್ಲಿಯಾ ಸಾಗರ್ ಗ್ರೂಪ್ ಮಾಲಕ ಮಹಮ್ಮದ್ ಸಾಗರ್, ನೂರಾನಿಯಾ ಎಸೋಸಿಯೇಶನ್ ಇಕ್ಬಾಲ್ ಎ.ಕೆ., ಯುವ ಉದ್ಯಮಿ ಹಸೈನಾರ್ ಮತ್ತಿತರ ಗಣ್ಯ ಅಥಿತಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.