×
Ad

ವಾರ್ತಾಭಾರತಿ ವರದಿಗಾರನ ಬಂಧನ: ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ

Update: 2017-09-08 17:57 IST

ಮಂಗಳೂರು, ಸೆ. 8: ಕಾನೂನು ನಿಯಮವನ್ನು ಪಾಲಿಸದೆ ವಾರ್ತಾಭಾರತಿ ಬಂಟ್ವಾಳ ವರದಿಗಾರನನ್ನು ಬಂಧಿಸಿರುವ ಕ್ರಮವು ಪೊಲೀಸ್ ಇಲಾಖೆಯ ಗೌರವಕ್ಕೆ ಕುಂದುಂಟು ಮಾಡುವಂಥದ್ದು ಮತ್ತು ನಾಗರಿಕ ಸಮಾಜವು ಪೊಲೀಸ್ ಇಲಾಖೆಯನ್ನು ಅನುಮಾನದ ಕಣ್ಣಿನಿಂದ ನೋಡುವುದಕ್ಕೆ ಕಾರಣವಾಗುವಂಥದ್ದಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ  ತಿಳಿಸಿದ್ದಾರೆ. 

ಕಾನೂನನ್ನು ಮೀರಿ ಯಾರೂ ಇಲ್ಲ ಎಂದು ಹೇಳುವ ಮಾತಿನಲ್ಲಿ ಪೊಲೀಸ್ ಇಲಾಖೆಯೂ ಒಳಗೊಳ್ಳುತ್ತದೆ. ಈ ಪ್ರಕರಣದಲ್ಲಿ ಕಾನೂನನ್ನು ಪಾಲಿಸದೆ ಇಲಾಖೆಯೇ ದುಡುಕಿರು ವುದು ಅದರ ನಿಷ್ಪಕ್ಷಪಾತ ವರ್ಚಸ್ಸಿಗೆ ಧಕ್ಕೆ ತರುವಂತಿದೆ. ವಾರ್ತಾಭಾರತಿ ಪತ್ರಿಕೆಯು ಜಿಲ್ಲಾ ಪೊಲೀಸ್ ಅಧಿಕಾರಿಯ ಸ್ಪಷ್ಟೀಕರಣವನ್ನೂ ಮರುದಿನದ ಸಂಚಿಕೆಯಲ್ಲಿ ಮುದ್ರಿಸಿರುವುದನ್ನು ಪರಿಗಣಿಸದೇ ಇರುವುದು ಸರಿಯಲ್ಲ. ಇದು ಇಲಾಖೆಯ ಪೂರ್ವಾಗ್ರಹ ಪೀಡಿತ ನಿಲುವನ್ನು ಸೂಚಿಸುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News