ಮೆಕ್ಸಿಕೋದಲ್ಲಿ ನಡುಗಿದ ಭೂಮಿ: ಸಾವಿನ ಸಂಖ್ಯೆ 26ಕ್ಕೇರಿಕೆ

Update: 2017-09-09 04:27 GMT

ಹೊಸದಿಲ್ಲಿ, ಸೆ.8: ಅಮೆರಿಕಾದ ಮೆಕ್ಸಿಕೋದಲ್ಲಿ ಸಂಭವಿಸಿದ ಭಾರೀ ತೀವ್ರತೆಯ ಭೂಕಂಪನದಿಂದ 26 ಮಂದಿ ಮೃತಪಟ್ಟಿದ್ದಾರೆ. 8.1 ತೀವ್ರತೆಯ ಭೂಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ.

ಭೂಕಂಪನದಿಂದ ಸಣ್ಣ ಮಟ್ಟಿನ ಸುನಾಮಿ ಅಲೆ ಎದ್ದಿದ್ದು, ಕೆಲ ಕಟ್ಟಡಗಳಿಗೆ ಹಾನಿಯಾಗಿದೆ. ಈ ಭೂಕಂಪನದ ತೀವ್ರತೆಯು 1985ರಲ್ಲಿ ಭೂಕಂಪವೊಂದು ಸಂಭವಿಸಿದ್ದು, ಸಾವಿರಾರು ಮಂದಿ ಮೃತಪಟ್ಟಿದ್ದರು. ಈ ಬಾರಿಯ ಭೂಕಂಪನದ ತೀವ್ರತೆಯು ಅದಕ್ಕಿಂತಲೂ ಹೆಚ್ಚಾಗಿದ್ದು, ಆದರೆ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ ಎನ್ನಲಾಗಿದೆ.

ಸುನಾಮಿ ಭೀತಿಯಿಂದ ಪುರ್ಟೋ ಮ್ಯಾಡ್ರಿಯೋದ ಜನರನ್ನು ಸ್ಥಳಾಂತರಿಸಲಾಗಿದೆ. ಭೂಕಂಪನದ ತೀವ್ರತೆಯು 8.4ರಷ್ಟಿತ್ತು ಎಂದು ಮೆಕ್ಸಿಕನ್ ಆಂತರಿಕ ಸಚಿವಾಲಯ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News