×
Ad

ಪತ್ರಕರ್ತನ ಬಂಧನ ಖಂಡನೀಯ: ಹಾರೂನ್ ರಶೀದ್

Update: 2017-09-08 20:28 IST

ವಿಟ್ಲ, ಸೆ. 8: ಬಂಟ್ವಾಳ ತಾಲೂಕಿನ ಪತ್ರಿಕಾ ವರದಿಗಾರ ಇಮ್ತಿಯಾಝ್ ಶಾ ತುಂಬೆ ಅವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧನಕ್ಕೊಳಪಡಿಸಲಾದ ಬಂಟ್ವಾಳ ನಗರ ಠಾಣಾ ಪೊಲೀಸರ ಕ್ರಮವನ್ನು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಹಾ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಅವರು ಖಂಡಿಸಿದ್ದಾರೆ.

ಪತ್ರಿಕಾ ವರದಿಯನ್ನು ಪ್ರಕಟಿಸಿದ್ದನ್ನು ಆಕ್ಷೇಪಿಸಿದ ಪೊಲೀಸರ ಕ್ರಮ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೃತ್ಯವಾಗಿದ್ದು, ಪತ್ರಕರ್ತರ ದೌರ್ಜನ್ಯದ ಬಗ್ಗೆ ಪಕ್ಷದ ವರಿಷ್ಠರ ಮುಖೇನ ಸರಕಾರದ ಮೇಲೆ ಒತ್ತಡ ಹಾಕಲಾಗುವುದೆಂದವರು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News