×
Ad

ಸೆ.13ರಿಂದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

Update: 2017-09-08 21:47 IST

ಉಡುಪಿ, ಸೆ.8: ಮೈಸೂರು ವಿಭಾಗಮಟ್ಟದ 2017-18ನೆ ಸಾಲಿನ ದಸರಾ ಕ್ರೀಡಾಕೂಟ ಸೆ.13ರಿಂದ ಪ್ರಾರಂಭಗೊಳ್ಳಲಿದೆ. ಉಡುಪಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ವೈಯುಕ್ತಿಕ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.

 ಭಾಗವಹಿಸುವ ಸ್ಪರ್ಧಿಗಳು ನಿಗದಿತ ದಿನದಂದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬೇಕು. ವಿಭಾಗ ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಡ್ಡಾಯ ವಾಗಿ 3 ಸ್ಟಾಂಪ್ ಅಳತೆಯ ಭಾವಚಿತ್ರವನ್ನು ತರಬೇಕು.

ಸ್ಪರ್ಧೆಯ ವಿವರಗಳು ಹೀಗಿವೆ
ಸೆ.13, 14ರಂದು ಬೆಳಗ್ಗೆ 10 ಕ್ಕೆ ಹ್ಯಾಂಡ್‌ಬಾಲ್, ನೆಟ್‌ಬಾಲ್ ಸ್ಪರ್ಧೆ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರು (ಮುಖ್ಯಸ್ಥರು: ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ವುತ್ತು ಕ್ರೀಡಾ ಇಲಾಖೆ, ಮೈಸೂರು)

ಸೆ.13,14ರಂದು ಬೆಳಗ್ಗೆ 7 ಕ್ಕೆ ಥ್ರೋಬಾಲ್, ಬಾಲ್‌ಬ್ಯಾಡ್ಮಿಂಟನ್ ಆಳ್ವಾಸ್ ಕ್ಯಾಂಪಸ್, ವಿದ್ಯಾಗಿರಿ, ಮೂಡಬಿದ್ರೆ (ಮುಖ್ಯಸ್ಥರು: ಉದಯ್ ಕುಮಾರ್ (ಥ್ರೋಬಾಲ್)- 9901835518, ಪ್ರವೀಣ್ ಕುಮಾರ್ (ಬಾಲ್ ಬ್ಯಾಡ್ಮಿಂಟನ್)-9742745132,)

ಸೆ. 16,17ರಂದು ಬೆಳಗ್ಗೆ 10 ಕ್ಕೆ ಅಥ್ಲೆಟಿಕ್ಸ್, ಟಿ.ಟಿ, ಶಟ್ಲ್ ಬ್ಯಾಡ್ಮಿಂಟನ್, ವಾಲಿಬಾಲ್ ಮಂಗಳಾ ಕ್ರೀಡಾಂಗಣ, ಮಂಗಳೂರು (ಮುಖ್ಯಸ್ಥರು: ಲಿಲ್ಲಿ ಪಾಯಸ್ 9481016542)
ಸೆ. 16,17ರಂದು ಬೆಳಗ್ಗೆ 9 ಕ್ಕೆ ಬಾಸ್ಕೆಟ್‌ಬಾಲ್, ಈಜು, ಹಾಕಿ, ಜಿಲ್ಲಾ ಕ್ರೀಡಾಂಗಣ ಹಾಸನ (ದೂರವಾಣಿ:08172-246056)

ಸೆ.17,18ರಂದು ಬೆಳಗ್ಗೆ 9 ಕ್ಕೆ ಫುಟ್‌ಬಾಲ್, ಜಿಲ್ಲಾ ಕ್ರೀಡಾಂಗಣ ಚಾಮರಾಜನಗರ (ಮುಖ್ಯಸ್ಥರು: ಸಹಾಯಕ ನಿರ್ದೇಶಕರು, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ) ಈ ಕುರಿತ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ನಂ: 0820-2521324ನ್ನು ಸಂಪರ್ಕಿಸಬಹುದು ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News