×
Ad

ರಸ್ತೆ ಅಪಘಾತ: ಬಾಲಕಿ ಮೃತ್ಯು

Update: 2017-09-10 17:19 IST

ಉಡುಪಿ, ಸೆ. 10: ಕಡಪಾಡಿ ಜಂಕ್ಷನ್ ರಾ.ಹೆ. 66ರಲ್ಲಿ ಇಂದು ಸಂಜೆ 3:45ರ ಸುಮಾರಿಗೆ ಸಂಭವಿಸಿದ ಅಪಘಾತವೊಂದರಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಮೃತ ಬಾಲಕಿಯನ್ನು ಇಲ್ಲಿನ ಕಟೀಲ್ ನಿವಾಸಿ ಸುಶ್ಮಿತಾ (11)  ಎಂದು ಗುರುತಿಸಲಾಗಿದೆ.

ಆಕೆ ತನ್ನ ಸಂಬಂಧಿಯ ಬೈಕ್ ನಲ್ಲಿ ಕಟೀಲ್ ನಿಂದ ಉದ್ಯಾವರಕ್ಕೆ ತೆರಳುತ್ತಿದ್ದ ಸಂದರ್ಭ ಕಡಪಾಡಿ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಬಸ್ ಅನ್ನು ಓರ್ವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಹಿಂದಿನಿಂದ ಬಂದ ಲಾರಿಯೊಂದು ರಸ್ತೆಗೆ ಬಿದ್ದ ಸುಶ್ಮಿತಾ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಕಾವು ಪೊಲೀಸ್ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News