ಶಿಕ್ಷಕರ ದಿನಾಚರಣೆ: ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ
ಉಡುಪಿ, ಸೆ.10: ಉಡುಪಿ ಆದರ್ಶ ಆಸ್ಪತ್ರೆಯ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಜನ್ಮ ಜಯಂತಿ, ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಶಿಕ್ಷಕರಿಗೆ ಉಚಿತ ಆರೋಗ್ಯ ತಪಾ ಸಣಾ ಶಿಬಿರವನ್ನು ರವಿವಾರ ಆದರ್ಶ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಅಪರ ಜಿಲ್ಲಾಧಿಕಾರಿ ಅನು ರಾಧಾ ಜಿ. ಮಾತನಾಡಿ, ನಿರ್ದಿಷ್ಟ ಗುರಿ ಹಾಗೂ ಉತ್ತಮ ಗುರುವಿನ ಮಾರ್ಗ ದರ್ಶನ ಇಲ್ಲದೆ ಯಶಸ್ಸಿನ ಉತ್ತುಂಗಕ್ಕೆ ಏರಲು ಸಾಧ್ಯವಿಲ್ಲ. ಹಾಗಾಗಿ ಗುರು ಮತ್ತು ಗುರಿ ಜೀವನದಲ್ಲಿ ಅತಿ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ವಿ.ಲಮಾಣಿ, ಗೋವಿಂದ ಬಿಲ್ಲವ, ಬಿ.ಮೋಹನ್‌ದಾಸ್ ಶೆಟ್ಟಿ, ಶಿಕ್ಷಕ ಜಯಕರ್ ಶೆಟ್ಟಿ, ವೇಣುಗೋಪಾಲ್ ಶೆಟ್ಟಿ, ಆನಂದ ಕುಲಾಲ್, ಕೆ.ದಿನೇಶ್ ಪ್ರಭು, ಸುಮುನ ಬಾಯಿ, ಸ್ಟ್ಯಾನಿ ದಿನಮಣಿ, ಪ್ರಶಾಂತ್ ಪಿ., ಸುಬ್ರಹ್ಮಣ್ಯ ಎಸ್., ಶ್ರೀನಿವಾಸ ಪೈ, ಪ್ರವೀಣ್ ಪಿಂಟೊ, ಯೋಗೇಂದ್ರ ನಾಯಕ್, ರಮೇಶ್ ನಾಯಕ್, ಭಗವತಿ ಪ್ರಸನ್ನ, ಲತಾ ಆರ್. ಡಿಸೋಜ, ವಿ.ಕುಸುಮಾವತಿ, ಕೃಷ್ಣ ನಾಯಕ್ ಬಿ., ಶಾರದಾ ಎ., ಸಿಸ್ಟರ್ ಪ್ರೀತಿ ಕ್ರಾಸ್ಟ್ ಎ.ಸಿ., ಸಿಸ್ಟರ್ ವಿನ್ನಿ ಡಿಸೋಜ, ವೀರಾ ರ್ನಾಂಡಿಸ್, ಭುಜಂಗ ಬಿ.ಶೆಟ್ಟಿ, ಬಿ.ಬಾಲಗಂಗಾಧರ ಶೆಟ್ಟಿ, ಕೆ.ರಾಜಾರಾಮ್ ಐತಾಳ್, ಅಸ್ಲಾಮ್ ಹೈಕಾಡಿ, ಲಿಖಿತಾ ವಿ. ಕೊಠಾರಿ ಅವರಿಗೆ ಆದರ್ಶ ಶಿಕ್ಷಕ ಪ್ರಸ್ತಿಯನ್ನು ಪ್ರದಾನ ಮಾಡಲಾಯಿತು.
ಉಡುಪಿ ನಗರಸಭೆ ಪೌರಾಯುಕ್ತ ಡಿ.ಮಂಜುನಾಥಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಖರ್, ಕುದಿ ವಿಷ್ಣುಮೂರ್ತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ, ಶಸಚಿಕಿತ್ಸಾ ಹಿರಿಯ ತಜ್ಞ ಪ್ರೊ.ಎ.ರಾಜಾ ಎಂ.ಎಸ್., ಕುಂದಾಪುರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಉಪಸ್ಥಿತರಿದ್ದರು. ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಾವಂಜೆ ಕಾರ್ಯಕ್ರಮ ನಿರೂಪಿಸಿದರು.