ಪರ್ಲಿಯ: ನೂರಾನಿಯಾ ಎಸೋಸಿಯೇಶನ್ ವತಿಯಿಂದ ರಕ್ತದಾನ ಶಿಬಿರ
ಬಂಟ್ವಾಳ, ಸೆ. 10: ನೂರಾನಿಯಾ ಎಸೋಸಿಯೇಶನ್ ಪರ್ಲಿಯಾ ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಇದರ ಜಂಟಿ ಆಶ್ರಯದಲ್ಲಿ ಇಂದು ನೂರಾನಿಯಾ ಎಸೋಸಿಯೇಶನ್ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಖಿದ್ಮತುಲ್ ಇಸ್ಲಾಂ ಮದರಸದ ಮುಖ್ಯೋಪಾದ್ಯಾಯ ಶರೀಫ್ ಮದನಿ ಮಾಡಿದರು. ಅಧ್ಯಕ್ಷತೆಯನ್ನು ಸಾಗರ್ ಗ್ರೂಪ್ ಮಾಲಕ ಮುಹಮ್ಮದ್ ಸಾಗರ್ ವಹಿಸಿದರು.
ಮುಖ್ಯ ಅಥಿತಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ರಿಯಾಝ್ ಹುಸೈನ್, ನೂರಾನಿಯಾ ಎಸೋಸಿಯೇಶನ್ ಅಧ್ಯಕ್ಷ ಇಕ್ಬಾಲ್ ಎ.ಕೆ., ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಡಾ. ಗೌರವ್, ಡಾ. ನರೇಂದ್ರ, ಖಿದ್ಮತುಲ್ ಇಸ್ಲಾಮ್ ಮದರಸದ ಮಾಜಿ ಅಧ್ಯಕ್ಷ ಹಾಮದ್ ಬಾವಾ, ಹಿರಿಯರಾದ ಹೈದರ್ ಕಡಪಿಕರಿಯ, ಸಾಮಾಜಿಕ ಕಾರ್ಯಕರ್ತ ಆಶಿಕ್ ಕುಕ್ಕಾಜೆ, ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿಗಳಾದ ಜ್ಯೋತಿ, ದುಲ್ಸಿನ್, ಸವಿತಾ, ಅಶ್ವಿನಿ, ವಲಿತಾ, ನಾಗಭೂಷಣ್, ಶಾಕಿರಾ, ಫಾತಿಮಾ ಸಂಶಾದ್, ಸಫೀನಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಶೀರ್ ವಿಟ್ಲ ಅಥಿತಿಗಳನ್ನು ಸ್ವಾಗತಿಸಿ, ವಂದಿಸಿದರು.