ರಾಜಕೀಯ ಬಣ್ಣವನ್ನು ಪಡೆದುಕೊಳ್ಳುತ್ತಿರುವ ಪಟೇಲ್ ಮೀಸಲಾತಿ ಚಳವಳಿ: ಅಮಿತ್ ಶಾ

Update: 2017-09-10 12:47 GMT

ಅಹ್ಮದಾಬಾದ್,ಸೆ.10: ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟೇಲ್ ಮೀಸಲಾತಿಚಳವಳಿಯು ರಾಜಕೀಯ ಬಣ್ಣವನ್ನು ಪಡೆದುಕೊಳ್ಳುತ್ತಿದ್ದು, ‘ಒಂದು ರಾಜಕೀಯ ಪಕ್ಷ ’ದತ್ತ ವಾಲುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರವಿವಾರ ಇಲ್ಲಿ ಕಾಂಗ್ರೆಸ್‌ನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.

ಅವರು ಇಲ್ಲಿ ಕಾರ್ಯಕ್ರಮವೊಂದರಲ್ಲಿ ಯುವಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಒಬಿಸಿ ವರ್ಗದಡಿ ಮೀಸಲಾತಿಗಾಗಿ ಪಾಟಿದಾರ್ ಚಳವಳಿಯೊಂದಿಗೆ ಬಿಜೆಪಿ ಸರಕಾರವು ಹೇಗೆ ವ್ಯವಹರಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾನೂನು ಪ್ರಕ್ರಿಯೆ’ಯನ್ನು ಅನುಸರಿಸುವಂತೆ ಬಿಜೆಪಿ ಸರಕಾರವು ಹಾರ್ದಿಕ ಪಟೇಲ್ ನೇತೃತ್ವದ ಪ್ರತಿಭಟನಾಕಾರರಿಗೆ ಸೂಚಿಸಿದೆ, ಆದರೆ ಚಳವಳಿಯ ದಿಕ್ಕು ಈಗ ಬದಲಾಗಿದೆ. ಬೆಳವಣಿಗೆಗಳನ್ನು ಗಮನಿಸಿದರೆ ಅದೀಗ ಒಂದು ರಾಜಕೀಯ ಪಕ್ಷ ಬೆಂಬಲಿತ ಚಳವಳಿಯಾಗಿದೆ ಎಂದರು.

 ಜನರು ಭಾವನಾತ್ಮಕವಾಗಿ ಚಳವಳಿಯನ್ನು ಸೇರಿದ್ದರು, ಆದರೆ ಸಂಘಟಕರು ಈಗ ಒಂದು ರಾಜಕೀಯ ಪಕ್ಷದತ್ತ ವಾಲುತ್ತಿದ್ದಾರೆ ಎಂದು ಶಾ ನುಡಿದರು.

 ಪಾಟಿದಾರ್ ಚಳವಳಿಯ ಮುಖ್ಯ ಬೇಡಿಕೆಯಂತೆ ಯಾವುದೇ ಜಾತಿಯನ್ನು ಒಬಿಸಿ ವರ್ಗದಲ್ಲಿ ಸೇರಿಸಬೇಕಾದರೆ ಆ ಜಾತಿಯು ಒಬಿಸಿ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬ ಹುದು ಎಂದು ಅವರು ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News