×
Ad

ಪಡುಬಿದ್ರೆ: ಮುದ್ದುಕೃಷ್ಣ ಸ್ಪರ್ಧೆ

Update: 2017-09-10 18:50 IST

ಪಡುಬಿದ್ರೆ, ಸೆ. 10: ರೋಟರಿ ಕ್ಲಬ್ ಪಡುಬಿದ್ರೆ ಹಾಗೂ ಇನ್ನರ್‌ವೀಲ್ ಕ್ಲಬ್ ಇವುಗಳ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಫಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆ ಪಡುಬಿದ್ರೆ ಬಿಲ್ಲವ ಸೇವಾ ಸಮಾಜ ಮಂದಿರಲ್ಲಿ ನಡೆಯಿತು.

ಪಡುಬಿದ್ರೆ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂ. ಉಪಾಧ್ಯಕ್ಷ ವೈ. ಸುಕುಮಾರ್, ರೋಟರಿ ವಲಯ ಸೇನಾನಿ ಕೃಷ್ಣ ಪಿ. ಬಂಗೇರ, ಇನ್ನರ್‌ವೀಲ್ ಅಧ್ಯಕ್ಷೆ ಸುನೀಯಾ ಭಕ್ತ ವತ್ಸಲ, ಕಾರ್ಯದರ್ಶಿ ಕಸ್ತೂರಿ ಪ್ರವೀಣ್, ಉದ್ಯಮಿ ಅರುಣ್, ಕಾರ್ಯಕ್ರಮ ನಿರ್ದೇಶಕಿ ಗೀತಾ ಅರುಣ್, ಕಾರ್ಯದರ್ಶಿ ಸಂದೀಪ್ ಭಂಡಾರಿ ಉಪಸ್ಥಿತರಿದ್ದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಪಡುಬಿದ್ರೆ ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸೇನಾನಿ ಕೃಷ್ಣ ಪಿ.ಬಂಗೇರ, ಇನ್ನರ್‌ವೀಲ್ ಅಧ್ಯಕ್ಷೆ ಸುನೀತಾ ಭಕ್ತ ವತ್ಸಲ, ಕಾರ್ಯದರ್ಶಿ ಕಸ್ತೂರಿ ಪ್ರವೀಣ್, ಉದ್ಯಮಿ ಅರುಣ್, ಗೀತಾ ಅರುಣ್, ಗ್ರಾಮ ಪಂ. ಸದಸ್ಯೆ ಸೇವಂತಿ ಸದಾಶಿವ್, ತೀರ್ಪುಗಾರರಾದ ಮಂಗಳಾ ಕಿಶೋರ್, ಸುರೇಖಾ ಅರುಣ್ ಉಪಸ್ಥಿತರಿದ್ದರು. ರೋಟರಿ ಸದಸ್ಯ ಸುಧಾಕರ ಕೆ. ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಪಡುಬಿದ್ರೆ ವಂದಿಸಿದರು.

ಫಲಿತಾಂಶ: ಮುದ್ದುಕೃಷ್ಣ ಸ್ಪರ್ಧೆಯಲ್ಲಿ 50ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. 3 ವರ್ಷದೊಳಗಿನ ಮಕ್ಕಳಲ್ಲಿ ಸ್ವರ ಶ್ರೀನಿವಾಸ (ಪ್ರಥಮ), ಸ್ತುತಿ ಎಮ್.ಜೈನ್ (ದ್ವಿತೀಯ, ಆರಾಧ್ಯ ಎಸ್ (ತೃತೀಯ), 3-6 ವರ್ಷದೊಳಗೆ ತ್ರೀಶಾ (ಪ್ರಥಮ), ಆದ್ಯ ದೇವಾಡಿಗ (ದ್ವಿತೀಯ), ರಿಧಿ ಹಳೆಯಂಗಡಿ (ತೃತೀಯ), 6-10ವರ್ಷದೊಳಗೆ ಸಾನ್ವಿ (ಪ್ರಥಮ), ದೀಕ್ಷಾ (ದ್ವಿತೀಯ), ಮನಸ್ವಿ (ತೃತೀಯ) ಬಹುಾನಗಳನ್ನು ಪಡೆದುಕೊಂಡರು.

ಕಟಕ ಚಲನಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಬಾಲ ನಟಿ ಶ್ಲಾಘ ಸಾಲಿಗ್ರಾಮ ಅವರ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ಆಕೆಯನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News