×
Ad

ಫರಂಗಿಪೇಟೆ: ಕುಂಪನಮಜಲು ಅರಫಾ ಜುಮಾ ಮಸೀದಿ ಉದ್ಘಾಟನೆ

Update: 2017-09-10 19:13 IST

ವಿಟ್ಲ, ಸೆ. 10: ಭಾರತದ ಮಣ್ಣಿಗೆ ಪವಿತ್ರ ಇಸ್ಲಾಂ ಬಂದಂದಿನಿಂದಲೂ ಮತ ಸೌಹಾರ್ದತೆಯಿಂದ ಮಾತ್ರ ಮಸೀದಿ ನಿರ್ಮಾಣ ಕಾರ್ಯಗಳು ನಡೆಯುತ್ತಾ ಬಂದಿವೆ. ಇಲ್ಲಿನ ಸಹೋದರ ಧರ್ಮೀಯರ ಸರ್ವ ಸಹಕಾರದೊಂದಿಗೆ ಮಸೀದಿಗಳು ಸ್ಥಾಪನೆಗೊಂಡಿವೆ. ಇಂತಹ ಧಾರ್ಮಿಕ ಸೌಹಾರ್ದತೆಗಳು ಶಾಶ್ವತವಾಗಿ ನೆಲೆ ನಿಲ್ಲಬೇಕಾಗಿದೆ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

ತಾಲೂಕಿನ ಫರಂಗಿಪೇಟೆ ಸಮೀಪದ ಕುಂಪನಮಜಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಅರಫಾ ಜುಮಾ ಮಸೀದಿಯನ್ನು ರವಿವಾರ ಮಧ್ಯಾಹ್ನ ಉದ್ಘಾಟಿಸಿ, ವಕ್ಫ್ ನಿರ್ವಹಣೆ ನಡೆಸಿದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ವ್ಯಕ್ತಿ ಮಾಡುವ ಪ್ರತಿಯೊಂದು ಕಾರ್ಯವೂ ಅತ್ಯುತ್ತಮ ಸಂಕಲ್ಪದಿಂದ ಕೂಡಿದ್ದರೆ ಅದು ಸತ್ಫಲವನ್ನು ನೀಡುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವ ಪ್ರೀತಿ-ಸೌಹಾರ್ದದ ಸಮಾಜ ನಿರ್ಮಾಣಕ್ಕೆ ಪ್ರತೀಯೋರ್ವರು ಪಣತೊಡಬೇಕಾಗಿದೆ. ಹೀಗಾದಲ್ಲಿ ಮಾತ್ರ ಜಾತ್ಯಾತೀತ ಭಾರತದ ವಿವಿಧತೆಯಲ್ಲಿ ಏಕತೆ ಸಿದ್ಧಾಂತವನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್  ಮಿತ್ತಬೈಲು ದುವಾ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಫರಂಗಿಪೇಟೆ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ, ಹಾಜಿ ಬಿ. ಶೇಕುಂಞಿ ಜೋಕಟ್ಟೆ, ಅಲ್-ಜುಬೈಲ್ ಅಲ್-ಮಝೈನ್ ಗ್ರೂಪ್ ಚೆಯರ್‌ಮೆನ್ ಹಾಜಿ ಬಿ.ಝಕರಿಯಾ ಜೋಕಟ್ಟೆ, ಅಲ್-ಜುಬೈಲ್ ವೈಟ್‌ಸ್ಟೋನ್ ಗ್ರೂಪ್ ಚೆಯರ್‌ಮೆನ್ ಹಾಜಿ ಬಿ.ಎಂ. ಶರೀಫ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಜುಬೈಲ್ ಉದ್ಯಮಿ ಟಿ.ಎಚ್. ಮೆಹಬೂಬ್ ಕೃಷ್ಣಾಪುರ, ಮಂಗಳೂರು ಹಿದಾಯ ಫೌಂಡೇಶನ್ ಸ್ಥಾಪಕ ಕಾಸಿಂ ಅಹ್ಮದ್ ಎಚ್.ಕೆ., ಅಧ್ಯಕ್ಷ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಯು. ಫಾರೂಕ್ ತರೀಕೆರೆ, ಉದ್ಯಮಿಗಳಾದ ಹಸನ್ ಬೋಳಾರ್, ಅಬೂಬಕರ್ ಸಿದ್ದೀಕ್ ಹೆಜಮಾಡಿ, ಮುಹಮ್ಮದ್ ಇಕ್ಬಾಲ್, ಮನ್ಸೂರ್ ಅಹ್ಮದ್ ಬಂದರ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ, ಜಿ.ಪಂ. ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಉಪಾಧ್ಯಕ್ಷ ಕೆ. ಅಶ್ರಫ್, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್, ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಫ್. ಮುಹಮ್ಮದ್ ಬಾವಾ, ಕಾರ್ಯದರ್ಶಿ ಯೂಸುಫ್ ಅಲಂಕಾರ್, ರೆಸ್ಕ್ಯೂ ಫೌಂಡೇಶನ್ ಅಧ್ಯಕ್ಷ ಜಬ್ಬಾರ್ ಮಾರಿಪಳ್ಳ, ಪುದು ಗ್ರಾ.ಪಂ. ಮಾಜಿ ಸದಸ್ಯ ಕೆ. ಮುಹಮ್ಮದ್ ರಫೀಕ್, ಹಾಜಿ ಸಾವುಂಞಿ ತುಂಬೆ, ಸಂಜೀವ ಹೆಗ್ಡೆ ಕುಂಪನಮಜಲು, ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ಝಹೀರ್ ಅಬ್ಬಾಸ್, ಅಮ್ಮೆಮಾರು ಜುಮಾ ಮಸೀದಿ ಅಧ್ಯಕ್ಷ ಉಮರಬ್ಬ, ಮಾರಿಪಳ್ಳ ಜುಮಾ ಮಸೀದಿ ಉಪಾಧ್ಯಕ್ಷ ಖಾಜಾ ಅಬೂಬಕರ್ ಬಾವಾ, ಮಾರಿಪಳ್ಳ ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಹೈದರ್ ಪರ್ತಿಪ್ಪಾಡಿ, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಅಬ್ದುಲ್ ಮಜೀದ್ ಫೈಝಿ ನಂದಾವರ, ಫರಂಗಿಪೇಟೆ ಮಸೀದಿಯ ಮಾಜಿ ಖತೀಬ್ ಅಬೂಝಾಹಿರ ಉಸ್ಮಾನ್ ದಾರಿಮಿ, ಎಫ್.ಎ. ಖಾದರ್, ಯೂನುಸ್, ಯು.ಟಿ. ಇಫ್ತಿಕಾರ್, ಅಸ್ಗರ್, ಅಬ್ದುಲ್ ಅಮಾನ್ ಕತಾರ್, ಸುಂದರ ಶೆಟ್ಟಿ ಕಲ್ಲತಡ್ಮೆ, ನೌಶಾದ್ ಹಾಜಿ ಸೂರಲ್ಪಾಡಿ, ಚಂದ್ರಶೇಖರ ಗಾಂಭೀರ ಹಾಗೂ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಬುಖಾರಿ, ಅಬ್ದುಲ್ಲ (ಅದ್ದ), ಶರೀಫ್, ಸಲೀಂ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ದಾನಿಗಳಾದ ಬಿ.ಎಂ. ಶರೀಫ್, ಹಸನ್ ಬೋಳಾರ್, ರಿಯಾಝ್ ಆಲಂ, ಝಕರಿಯಾ ಜೋಕಟ್ಟೆ, ಇಂಜಿನಿಯರ್ ಮುಖ್ತಾರ್ ಸೂರಲ್ಪಾಡಿ, ಗುತ್ತಿಗೆದಾರ ಮುಶ್ತಾಕ್, ಉಸ್ಮಾನ್ ಅಶ್ರಫ್, ಕುಂಪನಮಜಲು ನಿವಾಸಿಗಳಾದ ಬಾವಾಕ, ಶರೀಫ್, ಶೇಖ್ ಮಯ್ಯದ್ದಿ ಅವರನ್ನು ಅಭಿನಂದಿಸಲಾಯಿತು.

ಅರಫಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಆಸಿಫ್ ಇಕ್ಬಾಲ್ ಸ್ವಾಗತಿಸಿ, ಸಲೀಂ ವಂದಿಸಿದರು. ಮದ್ರಸ ವಿದ್ಯಾರ್ಥಿ ಅಬ್ದುರ್ರಹ್ಮಾನ್ ರಿಹಾಂ ಕಿರಾಅತ್ ಪಠಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಹಾಗೂ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪಾಯಸ ವಿತರಿಸಿ ಸೌಹಾರ್ದ ಸಂದೇಶ ಸಾರಿದ ಹಿಂದೂ ಕುಟುಂಬಗಳು
ಮಸೀದಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸರ್ವ ಜನತೆಗೆ ಕುಂಪನಮಜಲು ನಿವಾಸಿ ದಿವಂಗತ ಸೋಮಪ್ಪ ಆಳ್ವ ಅವರ ಪುತ್ರರಾದ ಆನಂದ ಆಳ್ವ ಹಾಗೂ ವಿಠಲ ಆಳ್ವ ಮತ್ತು ಕುಟುಂಬಸ್ಥರು ಸೇರಿ ಪಾಯಸ ವಿತರಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News