ಸೆ. 11: ಗೌರಿ ಹತ್ಯೆ, ಪತ್ರಕರ್ತನ ಬಂಧನ, ವರದಿಗಾರನಿಗೆ ಹಲ್ಲೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ
Update: 2017-09-10 19:32 IST
ವಿಟ್ಲ, ಸೆ. 11: ಸಂವಿದಾನದ ನಾಲ್ಕನೆ ಅಂಗವಾಗಿರುವ ಪತ್ರಿಕಾ ಮಾಧ್ಯಮದ ಮೇಲೆ ಮುಗಿ ಬೀಳುವ ಮೂಲಕ ಪಟ್ಟಭದ್ರರು ಇಂದು ಅಟ್ಟಹಾಸ ಮೆರೆಯುತ್ತಿರುವುದು ತೀವ್ರ ಆಘಾತಕಾರಿ ಬೆಳವಣಿಗೆ ಇದನ್ನು ವಿರೋಧಿಸಿ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು.
ನಾಡಿನ ಹಿರಿಯ ಸಾಹಿತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ವಾರ್ತಾಭಾರತಿ ಬಂಟ್ವಾಳ ವರದಿಗಾರ ಇಮ್ತಿಯಾಝ್ ತುಂಬೆ ಅವರ ಅನ್ಯಾಯದ ಬಂಧನ ವಿರೋಧಿಸಿ ಮತ್ತು ಮಂಗಳೂರು ಚಲೋ ಸಂದರ್ಭ ಮಾಧ್ಯಮ ಕ್ಯಾಮೆರಾಮೆನ್‌ಗಳ ಮೇಲೆ ನಡೆದ ಹಲ್ಲೆ ಪ್ರಕರಣಗಳನ್ನು ವಿರೋಧಿಸಿ ಹಾಗೂ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಜಾತ್ಯಾತೀತ ಜನತಾದಳ (ಜೆಡಿಎಸ್) ವತಿಯಿಂದ ಸೆ. 11ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಜೆಡಿಎಸ್ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.