×
Ad

ಜಲ ಜಾಲ,ಹೆದ್ದಾರಿ ಕಮ್ ರನ್‌ವೇಗಳಿಗೆ ಆದ್ಯತೆ: ಗಡ್ಕರಿ

Update: 2017-09-10 19:33 IST

ಹೊಸದಿಲ್ಲಿ,ಸೆ.10: ಗ್ರಾಮೀಣ ಭಾರತದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇ-ರಿಕ್ಷಾಗಳ ಸಂಚಾರ, ವಿದ್ಯುತ್ ಜಾಲಗಳ ಮಾದರಿಯಲ್ಲಿ ಜಲ ಜಾಲ ಹಾಗೂ ರನ್‌ವೇ ಆಗಿಯೂ ಕಾರ್ಯ ನಿರ್ವಹಿಸಬಲ್ಲ 17 ಹೆದ್ದಾರಿಗಳ ನಿರ್ಮಾಣ ಇವು ಸರಕಾರದ ಆದ್ಯತೆಗಳಾ ಗಿದ್ದು, ಇವುಗಳಿಗೆ ಸಂಬಂಧಿಸಿದಂತೆ ಈ ವರ್ಷವೇ ಕಾರ್ಯ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.

 ಕಳೆದ ವಾರ ಸಂಪುಟ ಪುನರ್‌ರಚನೆಯ ಬಳಿಕ ಜಲ ಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನಃಶ್ಚೇತನದ ಹೆಚ್ಚುವರಿ ಹೊಣೆಯನ್ನು ವಹಿಸಿಕೊಂಡಿರುವ ಅವರು, ಗಂಗೆಯ ನಿರಂತರ ಹರಿವು ಮತ್ತು ಶುದ್ಧೀಕರಣದ ಇನ್ನೊಂದು ಬೃಹತ್ ಕೆಲಸ ತನ್ನ ಹೆಗಲನ್ನೇರಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ವಿದ್ಯುತ್ ಆಧಾರಿತ ಸಾರ್ವಜನಿಕ ಸಾರಿಗೆ ಈಗಿನ ತುರ್ತು ಅಗತ್ಯವಾಗಿದೆ ಮತ್ತು ಅದಕ್ಕಾಗಿ ನೀತಿಯೊಂದನ್ನು ನಾವು ತರುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಚಾಲಿತ ಇ-ರಿಕ್ಷಾ ಮತ್ತು ಇತರ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಅದರ ಬೆಲೆಯನ್ನು ಈಗಾಗಲೇ ಶೇ.40ರಷ್ಟು ತಗ್ಗಿಸಲಾಗಿದ್ದು, ಬಳಕೆಯು ಹೆಚ್ಚಿದ ಬಳಿಕ ಇನ್ನಷ್ಟು ಇಳಿಯಲಿದೆ ಎಂದರು.

ಭಾರತವು ಮಿಗತೆ ಕಲ್ಲಿದ್ದಲು ಮತ್ತು ವಿದ್ಯುತ್ ಹೊಂದಿದೆ. ವಿದ್ಯುತ್ ಮಾದರಿಯ ವಾಹನಗಳು ಅಗ್ಗವಾಗುತ್ತಿವೆ. ಸಾರಿಗೆ ಶುಲ್ಕಗಳು ಇಳಿಯಲಿವೆ. ಜನರಿಗೂ ಸುಸ್ಥಿರ ಸಾರಿಗೆ ಸೌಲಭ್ಯ ದೊರೆಯಲಿದೆ. ಪ.ಬಂಗಾಳ, ಆಂಧ್ರಪ್ರದೇಶ, ಈಶಾನ್ಯ ಭಾರತ, ಉತ್ತರ ಪ್ರದೇಶಗಳಂತಹ ರಾಜ್ಯಗಳಲ್ಲಿ ಅಮಾನವೀಯವಾಗಿರುವ, ಮಾನವರು ಎಳೆಯುವ ರಿಕ್ಷಾಗಳನ್ನು ನಿವಾರಿಸಲು ಮೆಟ್ರೋ ಮತ್ತು ವಿದ್ಯುತ್ ಸಾರಿಗೆಯನ್ನು ವಿಸ್ತರಿಸಲಾಗುವುದು ಎಂದ ಅವರು, ಈ ನಿಟ್ಟಿನಲ್ಲಿ ಬೃಹತ್ ಕೆಲಸಗಳಾಗಬೇಕಿದ್ದು, 2018ಕ್ಕೆ ಮುನ್ನ ಆರಂಭಿಸ ಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News