ಸೆ. 12ರಿಂದ ಸೈಯದ್ ಉಮರುಲ್ ಫಾರೂಖ್ ಅಲ್-ಬುಖಾರಿ ಉರೂಸ್ ಗೆ ಚಾಲನೆ
Update: 2017-09-10 20:22 IST
ಮಂಜೇಶ್ವರ, ಸೆ. 10: ಸಮಸ್ತ ಕೇಂದ್ರ ಮುಶಾವರ ಮೆಂಬರ್, ಎಸ್.ವ್ಯೆ.ಎಸ್ ಕೇರಳ ರಾಜ್ಯ ಕೋಶಾಧಿಕಾರಿ, ಮೊಹಲ್ಲಾಗಳ ಖಾಝಿ, ಮಳ್ ಹರ್ ಚೆಯರ್ ಮಾನ್ ಹಾಗಿದ್ದ ಸೈಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿ ಅವರ 2ನೆ ಉರೂಸ್ ಮುಬಾರಕ್ ಗೆ ಸೆ.12ರಂದು ಬೆಳಗ್ಗೆ 9:30ಕ್ಕೆ ಮುಖಾಂ ಝಿಯಾರತ್ ನೊಂದಿಗೆ ಚಾಲನೆಯಾಗಲಿದೆ.
ಮಗ್ರಿಬ್ ನಮಾಝ್ ನಂತರ ಬುರ್ದಾ ವಾರ್ಷಿಕ ಕಾಯ೯ಕ್ರಮ ನಡೆಯಲಿದೆ. ಸೆ.13ರಂದು ಮಗ್ರಿಬ್ ನಮಾಝ್ ನಂತರ ಜಲ್ಸತುಲ್ ಮಹಬ್ಬ ಸಂಗಮ ನಡೆಯಲಿದೆ. ಸೆ.14ರಂದು ಬೆಳಗ್ಗೆ 10 ಗಂಟೆಗೆ ಖತ್ಮುಲ್ ಖುರ್ ಆನ್ ಹಾಗೂ 11:30ಕ್ಕೆ ತಹ್ ಲೀಲ್ ನಡೆಯಲಿದೆ. ಮದ್ಯಾಹ್ನ 2 ಗಂಟೆಗೆ ಮೌಲಿದ್ ಹಾಗೂ ಸಂಜೆ 4 ಗಂಟೆಗೆ ಖತಂ ದುಆ: ನಡೆಯಲಿದೆ. 5 ಗಂಟೆಗೆ ಸಮಾರೋಪ ಸಮ್ಮೇಳನ ಹಾಗೂ ಸ್ವಲಾತ್ ಮಜ್ಲಿಸ್ ಆರಂಭವಾಗಲಿದ್ದು, ಕಾಯ೯ಕ್ರಮದಲ್ಲಿ ಪ್ರಮುಖ ಉಲಮಾ ಸಾದತೂಗಳೂ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.