ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2017-09-10 22:42 IST
ಕುಂದಾಪುರ, ಸೆ.10: ವೈಯಕ್ತಿಕ ಕಾರಣದಿಂದ ಮನನೊಂದ ಬಿಜೂರು ಗ್ರಾಮ ಉಚ್ಚೇರಿ ನಿವಾಸಿ ಸಿದ್ದ ಪೂಜಾರಿ (73) ಎಂಬವರು ಸೆ.9ರಂದು ಕೋಡಿ ತಲೆ ಹಳುವೆಬಾಗಿಲು ಎಂಬಲ್ಲಿ ಸಮುದ್ರದ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ಉಳಿಯಾರಗೋಳಿ ಗ್ರಾಮದ ಕಲ್ಯಾ ನಿವಾಸಿ ಸುರೇಶ್ ಶೆಟ್ಟಿ(36) ಎಂಬವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.