‘ಉನ್ನತ ಶಿಕ್ಷಣ, ಉತ್ತಮ ಸಂಸ್ಕಾರದಿಂದ ಬಲಿಷ್ಠ ಸಮಾಜ ನಿರ್ಮಾಣ’
ಉಡುಪಿ, ಸೆ.10: ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ನೀಡಿ ದಾಗ ಬಲಿಷ್ಠ ಸಮಾಜವನ್ನು ಕಟ್ಟಬಹುದಾಗಿದೆ ಎಂದು ರಾಜ್ಯ ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಎಳ್ಳಾರೆ ಬಿ.ಸದಾಶಿವ ಪ್ರಭು ಹೇಳಿದ್ದಾರೆ.
ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಬಂಟಕಲ್ಲು -ಮಣಿಪಾಲ ಇದರ ವತಿಯಿಂದ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ರವಿವಾರ ಆಯೋಜಿ ಸಲಾದ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿದ್ಯಾರ್ಥಿ ವೇತನ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಈ ಸಂದರ್ಭ ಬಿ.ಸದಾಶಿವ ಪ್ರಭು ಎಳ್ಳಾರೆ ಹಾಗೂ ಉಡುಪಿ ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಾಕ್ಸಿಂಗ್ ಕ್ರೀಡಾಪಟು ಸೂರಜ್ ಪಾಟ್ಕರ್, ಪಿಎಚ್‌ಡಿ ಸಾಧಕಿ ಮಾಲತಿ ನಾಯಕ್, ಎಲ್‌ಎಲ್‌ಬಿ ರ್ಯಾಂಕ್ ವಿಜೇತೆ ರಕ್ಷಾಪ್ರಕಾಶ್, ಶೈಕ್ಷಣಿಕ ಸಾಧಕಿ ಪಲ್ಲವಿ ಪ್ರಭು ಮತ್ತು ಹಿರಿಯ ಸಾಧಕರಾದ ಉದ್ಯಮಿ ರಾಮಕೃಷ್ಣ ನಾಯಕ್, ನಿವೃತ್ತ ಶಿಕ್ಷಕರಾದ ಬಿ.ಪುಂಡಲೀಕ ಮರಾಠೆ ಶಿರ್ವ, ಕುಂಡೇರಿ ಜಯಂತ ನಾಯಕ್ ಪಾಣೆ ಮಂಗಳೂರು ಅವರನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ವಹಿಸಿದ್ದರು. ಶ್ರೀನರಸಿಂಗೆ ಶ್ರೀನರಸಿಂಹ ದೇವಳದ ಆಡಳಿತ ಮೊಕ್ತೇಸರ ಅಲೆವೂರು ರಮೇಶ್ ಸಾಲ್ವಣ್‌ಕಾರ್, ಸಂಘದ ಗೌರವಾಧ್ಯಕ್ಷ ಎಂ.ಗೋಕುಲ್‌ದಾಸ್ ನಾಯಕ್, ಕೋಶಾಧಿಕಾರಿ ರಾಮಕೃಷ್ಣ ನಾಯಕ್, ಉಪಾಧ್ಯಕ್ಷ ಕೆ.ಆರ್. ಪಾಟ್ಕರ್ ಬಂಟಕಲ್ಲು, ಜತೆಕಾರ್ಯದರ್ಶಿ ವಿಠಲದಾಸ್ ಪ್ರ ಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಗೌರವ ಸಲಹೆಗಾರ ಬಿ.ಉಪೇಂದ್ರ ನಾಯಕ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಎಸ್.ಪಾಂಡುರಂಗ ಕಾಮತ್ ಎಳ್ಳಾರೆ ವಂದಿಸಿದರು. ದೇವದಾಸ್ ಪಾಟ್ಕರ್ ಮುದರಂಗಡಿ ಕಾರ್ಯಕ್ರಮ ನಿರೂಪಿಸಿದರು.