ರೋಹಿಂಗ್ಯಾ ಸಂತ್ರಸ್ತರ ಪಲಾಯನ ದಾರಿಗಳಲ್ಲಿ ನೆಲಬಾಂಬ್ ಹುದುಗಿಸಿರುವ ಮ್ಯಾನ್ಮಾರ್ ಸೇನೆ
Update: 2017-09-10 23:18 IST
ಯಾಂಗೂನ್,ಸೆ.10: ಹಿಂಸಾಚಾರ ಪೀಡಿತ ವಾಯುವ್ಯ ರಾಖ್ನೆ ರಾಜ್ಯದಿಂದ ನೆರೆಯ ಬಾಂಗ್ಲಾದೇಶಕ್ಕೆ ರೊಹಿಂಗ್ಯಾ ಮುಸ್ಲಿಮರು ಪಲಾಯನಗೈಯುತ್ತಿರುವ ದಾರಿಗಳಲ್ಲಿ ಮ್ಯಾನ್ಮಾರ್ ಸೇನೆಯು ನೆಲಬಾಂಬ್‌ಗಳನ್ನು ಹುದುಗಿಸಿಡುತ್ತಿದೆಯೆಂದು ಅಂತಾರಾಷ್ಟ್ರೀಯ ಮಾನವಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಮಾಡಿದೆ. ಇಂತಹ ನೆಲಬಾಂಬ್‌ಗಳ ಸ್ಪೋಟದಿಂದ ಕನಿಷ್ಠ ಇಬ್ಬರು ರೋಹಿಂಗ್ಯಾ ಸಂತ್ರಸ್ತರು ಗಾಯಗೊಂಡಿದ್ದಾರೆಂದು ಅದು ಹೇಳಿದೆ. ನೆಲಬಾಂಬ್ ಸ್ಫೋಟದಿಂದ ಕಾಲು ಕಳೆದುಕೊಂಡಿರುವ ವೃದ್ಧ ಮಹಿಳೆ ಹಾಗೂ ಗಂಭೀರ ಗಾಯಗೊಂಡ ಇನ್ನೋರ್ವ ವ್ಯಕ್ತಿಯನ್ನು ಕಂಡಿರುವುದಾಗಿ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದರ ಪತ್ರಕರ್ತರು ವರದಿ ಮಾಡಿದ್ದಾರೆ.