×
Ad

ಕಿನ್ಯಾ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ

Update: 2017-09-10 23:31 IST

ಉಳ್ಳಾಲ, ಸೆ. 10: ಸೋಶಿಯಲ್ ಡೆಮೊಕ್ರೆಟಿಕ್ ಆಫ್ ಇಂಡಿಯಾ ಕಿನ್ಯಾ ಶಾಖೆ ಮತ್ತು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗ ದೊಂದಿಗೆ ರಕ್ತದಾನ ಶಿಬಿರ ಕಿನ್ಯಾ ರೆಹ್ಮಾತ್ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ ನೊಂದವರಿಗೆ ಸಹಕರಿಸುವ ಕಾರ್ಯ ಮಹತ್ತರವಾದದ್ದು, ತುರ್ತು ಸಂದರ್ಭ ರಕ್ತಕ್ಕಾಗಿ ಪರದಾಡುವಂತಹ ಸ್ಥಿ ಹಿಂದೆ ಇತ್ತು. ಆದರೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಹಾಗೂ ರಕ್ತದಾನ ಶಿಬಿರಗಳಿಂದಾಗಿ ಅಂತಹ ಸಮಸ್ಯೆಯನ್ನು ದೂರವಾಗಿಸಲಾಗಿದೆ ಎಂದರು.

ಅಲ್ ಇಂಡಿಯಾ ಇಮಾಂ ಕೌನ್ಸಿಲ್ ದ.ಕ ಅಧ್ಯಕ್ಷ ಮಜೀದ್ ನಿಝಾಮಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಯೆನೆಪೋಯ ಮೆಡಿಕಲ್ ಕಾಲೇಜಿನ ರಕ್ತ ಶೇಖರಣೆ ವಿಭಾಗದ ಡಾ. ಪ್ರಿಯಾಂಕ ರಕ್ತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಎಸ್‌ಡಿಪಿಐ ಕಿನ್ಯಾ ಶಾಖೆ ಅಧ್ಯಕ್ಷ ಕಾಸೀಂ ಕಿನ್ಯಾ, ಆಲ್ ಇಂಡಿಯಾ ಇಮಾಂ ಕೌನ್ಸಿಲ್ ಆಧ್ಯಕ್ಷ ರಫೀಕ್ ದಾರಿಮಿ, ಎಸ್‌ಡಿಪಿಐ ಮಂಗಳೂರು ವಿಧಾಸ ಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ, ಉಪಾಧ್ಯಕ್ಷ ನೌಷಾದ್ ಕಲ್ಕಟ್ಟ, ಕಿನ್ಯಾ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಕೆ ಮೊಹಮ್ಮದ್, ಅಬ್ದುಲ್ಲಾ, ಕಿನ್ಯಾ ಗ್ರಾ.ಪಂ ಸದಸ್ಯರಾದ ಅಬೂಸಾಲಿ, ರಹ್ಮಾತ್ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ ಶಾಕಿರ್ ಚಾರ್‌ವಲ್ಚಿಲ್, ಪಿಎಫ್‌ಐ ಉಳ್ಳಾಲ ವಲಯ ಕಾರ್ಯದರ್ಶಿ ಎಸ್.ಎಂ ಬಶೀರ್, ದೇರಳಕಟ್ಟೆ ವಲಯಾಧ್ಯಕ್ಷ ಲತೀಫ್, ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಹ್ಯಾರೀಸ್ ಮಲಾರ್ ಸ್ವಾಗತಿಸಿದರು. ನೌಫಾಲ್ ಸಾಗ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News