×
Ad

ಸೆ.13: ಮುದ್ದು ಕೃಷ್ಣವೇಷ, ಹುಲಿವೇಷ ಕುಣಿತ ಸ್ಪರ್ಧೆ

Update: 2017-09-11 21:29 IST

ಮಲ್ಪೆ, ಸೆ.11: ಮಲ್ಪೆ ಹಾರ್ಬರ್ ಫ್ರೆಂಡ್ಸ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಾಮಿ ಪ್ರಯುಕ್ತ ಮುದ್ದುಕೃಷ್ಣ ಮತ್ತು ಹುಲಿವೇಷ ಕುಣಿತ ಸ್ಪರ್ಧೆಯು ಸೆ.13ರಂದು ಮಧ್ಯಾಹ್ನ 3:30ಕ್ಕೆ ಮಲ್ಪೆ ಬಸ್ ನಿಲ್ದಾಣದ ಅಯ್ಯಪ್ಪ ಮಂದಿರದ ಬಳಿ ನಡೆಯಲಿದೆ.

ಮುದ್ದುಕೃಷ್ಣ ವೇಷ ಸ್ಪರ್ಧೆಯು 2 ವರ್ಷದೊಳಗೆ, 2ರಿಂದ 4ವರ್ಷ ಮತ್ತು 4ರಿಂದ 6 ವರ್ಷದೊಳಗೆ ಒಟ್ಟು ಮೂರು ವಿಭಾಗದಲ್ಲಿ ನಡೆಯಲಿದೆ. ಹೆಸರನ್ನು ಸ್ಥಳದಲ್ಲೇ ನೋಂದಾವಣಿ ಮಾಡಲಾಗುವುದು. ವಿಜೇತರಿಗೆ ಆಕರ್ಷಕ ನಗದು ಬಹುಮಾನವನ್ನು ನೀಡಲಾಗುವುದು.

ಹುಲಿವೇಷ ಕುಣಿತ ಸ್ಪರ್ಧೆಯಲ್ಲಿ ಪ್ರಥಮ 33,333 ರೂ., ದ್ವಿತೀಯ 22,222 ರೂ., ತೃತೀಯ 11,111 ರೂ. ನೀಡಲಾಗುವುದು. ಮಾತ್ರವಲ್ಲದೆ ಭಾಗವಹಿಸಿದ ಎಲ್ಲ ಹುಲಿವೇಷ ತಂಡಗಳಿಗೆ ಪ್ರೋತ್ಸಾಹ ಧನವಾಗಿ 6,000 ರೂ. ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News